ದಾವಣಗೆರೆ: ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿ ವ್ಯಾಪ್ತಿಯ ಕಾಟೀಹಳ್ಳಿ ಗ್ರಾಮದ ಜಮೀನಿನಲ್ಲಿ ವಿದ್ಯುತ್ ಸ್ಪರ್ಶಿಸಿ ದಂಪತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಲತಾ ಹಾಗೂ ನಾಗರಾಜ್ ಮೃತ ದಂಪತಿಯಾಗಿದ್ದು, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಟ್ರಾನ್ಸ್ಫಾರ್ಮರ್ನಿಂದ ವಿದ್ಯುತ್ ಗ್ರೌಂಡ್ ಆಗಿದ್ದನ್ನು ಗಮನಿಸಿದೆ ತೆರಳಿದ ಪರಿಣಾಮ ಶಾಕ್ ತಗುಲಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನಾಗರಾಜ್ ಹಾಗೂ ಲತಾ ಇಬ್ಬರೂ ರೈತರಾಗಿದ್ದು, ದಿನನಿತ್ಯ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಮಳೆ ಹೆಚ್ಚಾಗಿದ್ದರಿಂದ ಬೆಳೆಯ ಆರೈಕೆ ಮಾಡುತ್ತಿದ್ದರು. ಮಳೆಯಿಂದ ಇಡೀ ಟ್ರಾನ್ಸ್‌ಫಾರ್ಮರ್ ಒದ್ದೆಯಾಗಿದ್ದು, ವಿದ್ಯುತ್ ಗ್ರೌಂಡ್ ಆಗಿದೆ. ಇದನ್ನು ಗಮನಿಸದ ಇಬ್ಬರೂ ಕೆಲಸ ಮಾಡುತ್ತಾ ಟ್ರಾನ್ಸ್‌ಫಾರ್ಮರ್ ಬಳಿ ತೆರಳಿದ್ದರು. ಈ ವೇಳೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.



