HomePolitics Newsಭಾವನಾತ್ಮಕವಾಗಿ ದೇವೇಗೌಡರು ನಾಟಕ ಮಾಡುತ್ತಾರೆ: ಸಿಪಿವೈ!

ಭಾವನಾತ್ಮಕವಾಗಿ ದೇವೇಗೌಡರು ನಾಟಕ ಮಾಡುತ್ತಾರೆ: ಸಿಪಿವೈ!

For Dai;y Updates Join Our whatsapp Group

Spread the love

ರಾಮನಗರ:- ಭಾವನಾತ್ಮಕವಾಗಿ ದೇವೇಗೌಡರು ನಾಟಕ ಮಾಡುತ್ತಾರೆ ಎಂದು ಸಿಪಿ ಯೋಗೇಶ್ವರ್ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು,ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಯಾರನ್ನೂ ರಾಜಕೀಯವಾಗಿ ಬೆಳೆಸಿಲ್ಲ. ಇವರು `ಒಂದಗೆ ಉಂಡರು ಅವರೇಕಾಳು ತಿನ್ನಬೇಡ’ ಎನ್ನುವಂತಹ ಜನ. ಅವರು, ನಾನು ಪರಸ್ಪರ ವಿರೋಧ ಮಾಡಿಕೊಂಡೆ ಇಲ್ಲಿಯವರೆಗೂ ಬಂದಿದ್ದೀವಿ. ಮೈತ್ರಿಯಾದ ಮೂರ್ನಾಲ್ಕು ತಿಂಗಳಲ್ಲೇ ಅವರ ಸಹವಾಸ ಸಾಕು ಅನ್ನಿಸಿತ್ತು.

ಯೋಗೇಶ್ವರ್ ಹಾಗೂ ಡಿಕೆಶಿ ಇಬ್ಬರು ಮೊದಲೇ ಮಾತನಾಡಿಕೊಂಡಿದ್ದರು ಎಂದು ಹೇಳುತ್ತಿದ್ದರು. ಆದರೆ ನಾನು ಕೊನೆ ಕ್ಷಣದವರೆಗೂ ಟಿಕೆಟ್‌ಗಾಗಿ ಕಾದೆ. ಆಗಲಿಲ್ಲ. ಅದಕ್ಕಾಗಿ ನಾನು ಕಾಂಗ್ರೆಸ್ ಸೇರ್ಪಡೆಯಾದೆ. ಹಿಂದೆ ಜೆಡಿಎಸ್-ಬಿಜೆಪಿ ಮೈತ್ರಿಗೆ ನಾನೇ ಕಾರಣನಾಗಿದ್ದೆ. ಈಗ ಅವರು ಎನ್‌ಡಿಎ ಲಾಭ ಪಡೆಯುತ್ತಿದ್ದರೆ ಅದಕ್ಕೆ ನಾನು ಕಾರಣ. ಅವರ ಭಾವ ಸಂಸದರಾಗಲು ನಾನು ಕಾರಣ ಎಂದರು.

ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದ್ರೂ ಅಭಿವೃದ್ಧಿ ಮಾಡಿಲ್ಲ. ರಾಜಕೀಯ ಸಿದ್ದಾಂತ ಏನೇ ಇರಬಹುದು, ಅಭಿವೃದ್ಧಿ ವಿಚಾರದಲ್ಲಿ ಒಂದೇಯಾಗಿರುತ್ತದೆ. ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಿಲ್ಲ.

ಯಮೋಷನಲ್ ಆಗಿ ಜನರ ಹತ್ತಿರ ಬರುತ್ತಾರೆ. ಕಣ್ಣೀರು ಹಾಕುತ್ತಾರೆ, ಡ್ರಾಮ ಮಾಡುತ್ತಾರೆ. ದೇವೇಗೌಡರು ಬಂದೂ ಭಾವನಾತ್ಮಕವಾಗಿ ನಾಟಕ ಮಾಡುತ್ತಾರೆ. ಇದಕ್ಕೆಲ್ಲ ಜನರು ಮರುಳಾಗಬಾರದು ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!