ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದು, ಅವರ ಕೆಟ್ಟ ಸಿನಿಮಾಗಳೂ ಸಹ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕಲೆಕ್ಷನ್ ಮಾಡುತ್ತವೆ. ಇತ್ತೀಚಿನ ಕೆಲವು ಚಿತ್ರಗಳು ದೊಡ್ಡ ಯಶಸ್ಸು ಕಾಣದಿದ್ದರೂ, ಪ್ರಭಾಸ್ ಕೈಯಲ್ಲಿ ಕನಿಷ್ಠ ಐದು ಸಿನಿಮಾಗಳಿವೆ. ಇಂತಹ ಸ್ಟಾರ್ ನಟನನ್ನು ‘ಮಿಡ್ ರೇಂಜ್ ಹೀರೋ’ ಎಂದು ಕರೆದಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ನಿನ್ನೆ ನಡೆದ ‘ದಿ ರಾಜಾ ಸಾಬ್’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಿರ್ದೇಶಕ ಮಾರುತಿ ವೇದಿಕೆಯಲ್ಲಿ ಮಾತನಾಡುತ್ತಾ ರಾಜಮೌಳಿಯವರ ಕೊಡುಗೆಯನ್ನು ಶ್ಲಾಘಿಸಿದರು. “ಒಬ್ಬ ಮೀಡಿಯಮ್ ರೇಂಜ್ ಹೀರೋವನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದವರು ರಾಜಮೌಳಿ” ಎಂದು ಅವರು ಹೇಳಿದ್ದು ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಮಾರುತಿ ತಮ್ಮ ಭಾಷಣದಲ್ಲಿ ಪ್ರಭಾಸ್ ಅವರನ್ನು ಹಲವು ರೀತಿಯಲ್ಲಿ ಕೊಂಡಾಡಿದ್ದರೂ, ಈ ಒಂದು ಪದ ಬಳಕೆ ಅಭಿಮಾನಿಗಳಿಗೆ ನೋವು ತಂದಿದೆ. ಭಾಷಣದ ವಿಡಿಯೋ ತುಣುಕು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಾರುತಿ ತೀವ್ರ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.
ಅಂದಹಾಗೆ ‘ದಿ ರಾಜಾ ಸಾಬ್’ ಸಿನಿಮಾವನ್ನು ಮಾರುತಿ ನಿರ್ದೇಶಿಸಿದ್ದು, ಇದು ಹಾರರ್ ಕಾಮಿಡಿ ಚಿತ್ರ. ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗಲಿದ್ದು, ನಿಧಿ ಅಗರ್ವಾಲ್ ಸೇರಿದಂತೆ ಮೂವರು ನಾಯಕಿಯರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.



