HomeGadag Newsಜೂ.1ರಂದು ಪಾಠೋಪಕರಣ ವಿತರಣೆ

ಜೂ.1ರಂದು ಪಾಠೋಪಕರಣ ವಿತರಣೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಶಿಕ್ಷಕ ಬಳಗದಿಂದ ಪಟ್ಟಣದ ನಿವೃತ್ತ ಶಿಕ್ಷಕಿ ಸಾವಿತ್ರಮ್ಮ ಶಂಕ್ರಪ್ಪ ನೇಕಾರ (ಗುಡಗೇರಿ) ಅವರ ಅಮೃತಮಹೋತ್ಸವ ಕಾರ್ಯಕ್ರಮದ ಅಂಗವಾಗಿ ರಾಮಗೇರಿ ಶಾಲೆಗೆ ಪಾಠೋಪಕರಣ, ವಸ್ತ್ರದಾನ ಹಾಗೂ ಸಸಿ ವಿತರಣಾ ಕಾರ್ಯಕ್ರಮವನ್ನು ಜೂ.1ರಂದು ಬೆಳಿಗ್ಗೆ 10ಕ್ಕೆ ಪಟ್ಟಣದ ಎಪಿಎಂಸಿ ವರ್ತಕರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಸಾನ್ನಿಧ್ಯವನ್ನು ಬೈರನಹಟ್ಟಿ ಮಠದ ಶ್ರೀ ದೊರೆಸ್ವಾಮಿ ಶಾಂತಲಿAಗ ಮಹಾಸ್ವಾಮಿಗಳು ವಹಿಸುವರು. ಅಮೃತ ಮಹೋತ್ಸವದ ಗೌರವವನ್ನು ಸಾವಿತ್ರಮ್ಮ ನೇಕಾರ (ಗುಡಗೇರಿ) ಸ್ವೀಕರಿಸುವರು. ಆರ್.ಎಸ್. ಬುರಡಿ ಕಾರ್ಯಕ್ರಮ ಉದ್ಘಾಟಿಸುವರು. ಶಾಂತಪ್ಪ ಗುಡಗೇರಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಶರಣ ಸಾಹಿತ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಅಭಿನಂದನಾ ನುಡಿಗಳನ್ನಾಡುವರು. ಅತಿಥಿಗಳಾಗಿ ಬಿಇಓ ಎಚ್.ಎನ್. ನಾಯಕ(ಶಿರಹಟ್ಟಿ), ಎಚ್.ಎಂ. ಪಡ್ನೇಸಿ(ಮುಂಡರಗಿ), ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಲಿತಮ್ಮ ಕೆರಿಮನಿ, ಎಂ.ಎA. ಹವಳದ, ಗುರುರಾಜ ಹವಳದ, ಬಿ.ಎಸ್. ಹರ್ಲಾಪುರ, ಈಶ್ವರ ಮೆಡ್ಲೇರಿ ಉಪಸ್ಥಿತರಿರುವರು ಎಂದು ಶಿಕ್ಷಕ ಬಳಗದ ಪ್ರಕಟಣೆ ತಿಳಿಸಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!