HomeLife Styleರಾಮಫಲ ಸೇವಿಸೋದರಿಂದ ಆರೋಗ್ಯಕ್ಕೆ ಯಾವೆಲ್ಲಾ ಪ್ರಯೋಜನಗಳಿವೆ ಗೊತ್ತಾ..?

ರಾಮಫಲ ಸೇವಿಸೋದರಿಂದ ಆರೋಗ್ಯಕ್ಕೆ ಯಾವೆಲ್ಲಾ ಪ್ರಯೋಜನಗಳಿವೆ ಗೊತ್ತಾ..?

For Dai;y Updates Join Our whatsapp Group

Spread the love

ಕೆಲವು ಹಣ್ಣುಗಳು ಮತ್ತು ತರಕಾರಿಗಳನ್ನು ನಾವು ಸೇವಿಸುವುದಿಲ್ಲ. ಕಾರಣ ಅವುಗಳ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ತಿಳಿದಿರುವುದಿಲ್ಲ. ಅಂತಹ ಅಪರೂಪದ ಹಣ್ಣುಗಳಲ್ಲಿ ರಾಮ ಫಲವೂ ಒಂದು. ಹೃದಯಾಕಾರದ ಮತ್ತು ಕೆಂಪು ಬಣ್ಣದ ಈ ರಾಮ ಫಲದ ಸಿಪ್ಪೆಯು ಹಲಸಿನ ಹಣ್ಣಿನ ತೊಗಟೆಗಿಂತ ಮೃದುವಾಗಿರುತ್ತದೆ. ಇದನ್ನು ನೆಟೆಡ್ ಸೀತಾಫಲ, ಬುಲಾಕ್ ಹಾರ್ಟ್, ಬುಲ್ ಹಾರ್ಟ್ ಎಂದೂ ಕರೆಯುತ್ತಾರೆ.

ಸಿಹಿ ಹೊಂದಿರುವ ಈ ರಾಮ ಫಲವನ್ನು ನಮ್ಮ ದೇಶದಲ್ಲಿ ಮಾತ್ರವಲ್ಲದೆ ಮಧ್ಯ ಅಮೇರಿಕಾ ಮತ್ತು ಯುರೋಪ್ನಲ್ಲಿಯೂ ಬೆಳೆಯಲಾಗುತ್ತದೆ. ನಿಮ್ಮ ಆಹಾರದಲ್ಲಿ ಈ ಹಣ್ಣುಗಳನ್ನು ಸೇರಿಸುವುದರಿಂದ ದೇಹದಲ್ಲಿ ಸೂಕ್ಷ್ಮ ಪೋಷಕಾಂಶಗಳ ಸಮೀಕರಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ

ರಾಮಫಲವು 5 ಅದ್ಭುತ ಆರೋಗ್ಯ ಪ್ರಯೋಜನಗಳು:

ಚರ್ಮ ಮತ್ತು ಕೂದಲಿಗೆ ಒಳ್ಳೆಯದು: ಇದು ವಿಟಮಿನ್ ಸಿ ಅಂಶವನ್ನು ಹೊಂದಿದ್ದು, ಅದು ನಿಮ್ಮ ಚರ್ಮ ಮತ್ತು ಕೂದಲಿಗೆ ಪ್ರಯೋಜನವನ್ನು ನೀಡುತ್ತದೆ. ಮೊಡವೆಗಳನ್ನು ಕಡಿಮೆ ಮಾಡಲು ರಾಮಫಲ ಒಳ್ಳೆಯದು. ಎಂದು ಅವ್ನಿ ಕೌಲ್ ಹೇಳುತ್ತಾರೆ. ಈ ಹಣ್ಣಿನಲ್ಲಿರುವ ವಿಟಮಿನ್ ಸಿ ಚರ್ಮದ ಸಮಸ್ಯೆಗಳಿಗೆ ಕಾರಣವಾಗುವ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನೀವು 30ರ ಹರೆಯದವರಾಗಿದ್ದರೆ ಮತ್ತು ಮೊಡವೆಗಳನ್ನು ಹೊಂದಿದ್ದರೆ ಈ ಹಣ್ಣು ನಿಮ್ಮ ಹೊಳಪನ್ನು ಮರಳಿ ತರಲು ಸಹಾಯ ಮಾಡುತ್ತದೆ.

ಮಧುಮೇಹಕ್ಕೆ ಒಳ್ಳೆಯದು: ಮದುಮೇಹಿಗಳಿಗೆ ವಿಶೇಷವಾಗಿ ಹಣ್ಣುಗಳ ವಿಚಾರಕ್ಕೆ ಬಂದಾಗ ಯಾವುದನ್ನು ತಿನ್ನಬೇಕು ಮತ್ತು ಯಾವುದನ್ನು ಇನ್ನಬಾರದು ಎಂಬುವುದನ್ನು ಆರಿಸಿಕೊಳ್ಳುವುದು ನಿರಂತರ ಹೋರಾಟವಾಗಿದೆ. ರಾಮಫಲವು ಒಂದು ಹೈಪರ್ ಲೋಕಲ್ ಹಣ್ಣು ಎಂದು ಅವ್ನಿ ಕೌಲ್ ಹೇಳುತ್ತಾರೆ, ಇದು ರಕ್ತದಲ್ಲಿನ ಗ್ಲೂಕೋಸ್ ಕಡಿಮೆಗೊಳಿಸುವ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಮಧುಮೇಹಕ್ಕೆ ಪ್ರಯೋಜನಕಾರಿಯಾಗಿದೆ.

ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ: ಚಳಿಗಾಲದ ಹವಾಮಾನದ ಬದಲಾವಣೆಯಿಂದಾಗಿ ಅನಾರೋಗ್ಯಕ್ಕೆ ಒಳಗಾಗುವ ಮತ್ತು ಶೀತ, ಕೆಮ್ಮಿನಿಂದ ನಿರಂತರವಾಗಿ ಹೋರಾಡುತ್ತಿರುವ ಎಲ್ಲರಿಗೂ ರಾಮಫಲ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಸಿ, ಎ ಮತ್ತು ಬಿ ವಿಟಮಿನ್‌ಗಳ ಅಂಶವು ರೋಗ ನಿರೋಧಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಾಗೂ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಎಂದು ಅವ್ನಿ ಕೌಲ್ ಹೆಳುತ್ತಾರೆ.

ದುರ್ಬಲ ಕೀಳುಗಳಿಗೆ ಸಹಾಯಕಾರಿ: ಚಳಿಗಾಲದಲ್ಲಿ ಕೀಲು ನೋವು ಹೆಚ್ಚಾಗುವುದು ಸಾಮಾನ್ಯವಾಗಿದೆ, ಅದರಲ್ಲೂ ವಿಶೇಷವಾಗಿ ವಯಸ್ಸಾದವರಲ್ಲಿ. ರಾಮಫಲವು ಈ ನೋವುಗಳ ಶಮನಕ್ಕೆ ಉಪಯೋಗಕಾರಿಯಾಗಿದೆ. ಇದು ಉರಿಯೂತ ನಿವಾರಕವಾಗಿರುವುದರಿಂದ ಇದು ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ಕೀಲು ನೋವು ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

ಹೃದಯಕ್ಕೆ ಪ್ರಯೋಜನಕಾರಿ: ರಾಮಫಲದಲ್ಲಿರುವ ವಿಟಮಿನ್ ಬಿ6 ಹೃದಯದ ಬಳಿ ಸಂಗ್ರಹವಾಗುವ ಕೊಬ್ಬನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯುತ್ತದೆ ಎಂದು ಅವ್ನಿ ಕೌಲ್ ಹೇಳುತ್ತಾರೆ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!