HomeLife Styleಕಿವಿ ನೋವು ನಿವಾರಣೆಗೆ ಬೆಸ್ಟ್‌ ಮನೆಮದ್ದುಗಳು ಯಾವುವು ಗೊತ್ತಾ..?

ಕಿವಿ ನೋವು ನಿವಾರಣೆಗೆ ಬೆಸ್ಟ್‌ ಮನೆಮದ್ದುಗಳು ಯಾವುವು ಗೊತ್ತಾ..?

For Dai;y Updates Join Our whatsapp Group

Spread the love

ಕಿವಿ ನಮ್ಮ ಇಂದ್ರಿಯಗಳಲ್ಲಿ ಪ್ರಮುಖವಾದ ಅಂಗವಾಗಿದ್ದು ಅತಿಸೂಕ್ಷ್ಮ ನರಗಳಿಂದ ಮೆದುಳಿನೊಂದಿಗೆ ಸಂಪರ್ಕ ಪಡೆದಿರುತ್ತದೆ. ಕೆಲವು ಕಾರಣಗಳಿಂದ ಕಿವಿಯ ಒಳಭಾಗದಲ್ಲಿ ನೋವು ಅಥವಾ ಗುಂಯ್ಗುಡುವುದು ಕೇಳುತ್ತಿದ್ದಂತೆ ಅಪಾರವಾದ ಅಸಹನೆ ಎದುರಾಗುತ್ತದೆ.

ಒಂದು ವೇಳೆ ಕಿವಿನೋವು ಆಗಾಗ ಬರುತ್ತಿದ್ದರೆ ಇದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದೇ ಇದ್ದರೂ ಒಂದು ಬಾರಿ ವೈದ್ಯರಲ್ಲಿ ತೋರಿಸಿ ಕಾರಣ ಕಂಡುಕೊಳ್ಳುವುದು ಅಗತ್ಯ.  ಕಿವಿ ನೋವು ಅಥವಾ ಕಿವಿಯಲ್ಲಿ ಸೋಂಕು ಉಂಟಾಗಿದ್ದರೆ ಇದನ್ನು ಗುಣಪಡಿಸಲು ಕೆಲವು ಮನೆಮದ್ದುಗಳು ಸಮರ್ಥವಾಗಿವೆ.

ಕಿವಿ ನೋವಿಗೆ ಇಲ್ಲಿದೆ ಸುಲಭ ಮನೆ ಮದ್ದುಗಳು

* ಬೆಳ್ಳುಳ್ಳಿಯ ಎಸಳನ್ನು ಹರಳೆಣ್ಣೆಯಲ್ಲಿ ಹುರಿದು, ಆರಿದ ಬಳಿಕ ಕಿವಿಗೆ ಈ ಎಣ್ಣೆ ಬಿಡುವುದರಿಂದ ಕಿವಿ ನೋವು ಶಮನವಾಗುತ್ತದೆ.

* ಕಿವಿಯೊಳಗೆ ಸಣ್ಣಕ್ರಿಮಿ ಕೀಟಗಳು ಹೋದರೆ, ಆ ತಕ್ಷಣವೇ ಅಡುಗೆಯ ಉಪ್ಪನ್ನು ಸ್ವಲ್ಪ ನೀರಿಗೆ ಬೆರಸಿ ಕಿವಿಗೆ ಬಿಡುವುದರಿಂದ ಸಣ್ಣಕ್ರಿಮಿ ಕೀಟಗಳು ಸಾಯುತ್ತವೆ.

* ದಿನನಿತ್ಯ ಹಸಿ ಮೂಲಂಗಿಯ ಸೇವನೆಯಿಂದ ಕಿವಿನೋವು ಶಮನವಾಗುತ್ತದೆ.

* ಕಿವಿಯಲ್ಲಿ ಹುಣ್ಣಾಗಿದ್ದು ಸೋರುತ್ತಿದ್ದರೆ, ತುಳಸಿ ರಸವನ್ನು ಕಿವಿಯೊಳಗೆ ಹಿಂಡುವುದರಿಂದ ಕಿವಿ ನೋವು ಗುಣಮುಖವಾಗುತ್ತದೆ.

* ಬೇವಿನ ಸೊಪ್ಪನ್ನು ನೀರಿನಲ್ಲಿ ಕುದಿಸಿ, ಇದರ ಹಬೆಯನ್ನು ಕಿವಿಯೊಳಗೆ ಬಿಡುವುದು ಈ ನೋವಿಗೆ ಉತ್ತಮವಾದ ಔಷಧಿ.

* ಕಿವಿನೋವು ಇದ್ದಲ್ಲಿ ಈರುಳ್ಳಿ ರಸವನ್ನು ಹಿಂಡುತ್ತಿದ್ದರೆ ನೋವು ಶಮನವಾಗುತ್ತದೆ.

* ಬಾಣಂತಿಯರು ಬೆಳ್ಳುಳ್ಳಿಯ ಚೂರುಗಳನ್ನು ಹತ್ತಿಯಲ್ಲಿ ಸುತ್ತಿ ಕಿವಿಯೊಳಗೆ ಇಟ್ಟುಕೊಳ್ಳುವುದರಿಂದ, ಶೀತದಿಂದ ಕಾಡುವ ಕಿವಿ ನೋವು ಹಾಗೂ ಕಿವಿ ಕಿವುಡಾಗುವ ಸಮಸ್ಯೆಯಿಂದ ಮುಕ್ತರಾಗಬಹುದು.

* ಸ್ವಲ್ಪ ಓಮ ಕಾಳನ್ನು ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ಈ ಎಣ್ಣೆಯನ್ನು ಕಿವಿಯೊಳಗೆ ಬಿಡುವುದರಿಂದ ನೋವು ಕಡಿಮೆಯಾಗುತ್ತದೆ.

* ಕಿವಿ ನೋವಿದ್ದರೆ ಮಾವಿನ ಎಲೆಗಳ ರಸವನ್ನು ತೆಗೆದು ಕಿವಿಗೆ ಹಾಕುವುದರಿಂದ ನೋವು ಶಮನವಾಗುತ್ತದೆ.

* ಶುಂಠಿ ರಸಕ್ಕೆ ಆಲಿವ್ ಎಣ್ಣೆಯನ್ನು ಸೇರಿಸಿ ಕಿವಿಗೆ ಹಾಕುವುದು ಈ ಸಮಸ್ಯೆಗೆ ಪರಿಣಾಮಕಾರಿಯಾಗಿದೆ.

* ಆಲಿವ್ ಎಣ್ಣೆಯನ್ನು ಬಿಸಿ ಮಾಡಿ, ಎಣ್ಣೆ ತಣ್ಣಗಾದ ನಂತರ ಕಿವಿಗೆ ಹಾಕುವುದರಿಂದಕುವುದರಿಂದ ನೋವು ಶಮನವಾಗುತ್ತದೆ.

* ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ, ತಣ್ಣಗಾದ ಬಳಿಕ ಕಿವಿಗೆ ಬಿಡುತ್ತಿದ್ದರೆ ನೋವು ಮಾಯವಾಗುತ್ತದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!