HomeLife Styleಸಣ್ಣ ವಿಷಯಕ್ಕೂ ಹೆಚ್ಚು ಚಿಂತೆ ಮಾಡುತ್ತೀರಾ? ಇದು ಓವರ್‌ಥಿಂಕಿಂಗ್ ಲಕ್ಷಣ!

ಸಣ್ಣ ವಿಷಯಕ್ಕೂ ಹೆಚ್ಚು ಚಿಂತೆ ಮಾಡುತ್ತೀರಾ? ಇದು ಓವರ್‌ಥಿಂಕಿಂಗ್ ಲಕ್ಷಣ!

For Dai;y Updates Join Our whatsapp Group

Spread the love

ಇತ್ತೀಚಿನ ದಿನಗಳಲ್ಲಿ ಅತಿಯಾಗಿ ಯೋಚಿಸುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಗಮನಾರ್ಹವಾಗಿದೆ.

ಕೆಲಸದ ಒತ್ತಡ, ಭವಿಷ್ಯದ ಬಗ್ಗೆ ಚಿಂತೆ, ಕುಟುಂಬದ ಜವಾಬ್ದಾರಿಗಳು ಹಾಗೂ ದೈನಂದಿನ ಸಮಸ್ಯೆಗಳು ಜನರನ್ನು ಅಗತ್ಯಕ್ಕಿಂತ ಹೆಚ್ಚು ಯೋಚಿಸುವಂತೆ ಮಾಡುತ್ತಿವೆ. ಸಣ್ಣ ವಿಷಯಗಳನ್ನೂ ದೀರ್ಘಕಾಲ ಯೋಚಿಸುವುದರಿಂದ ಮೆದುಳಿಗೆ ಬೇಕಾದಷ್ಟು ವಿಶ್ರಾಂತಿ ಸಿಗದೆ, ಇದು ಕ್ರಮೇಣ ವ್ಯಕ್ತಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ತಜ್ಞರ ಪ್ರಕಾರ ನಿರಂತರವಾಗಿ ಹೆಚ್ಚು ಯೋಚಿಸುವುದು ಮನಸ್ಸಿನ ಮೇಲೆ ಮಾತ್ರವಲ್ಲದೆ ದೇಹದ ಮೇಲೂ ಪರಿಣಾಮ ಬೀರುತ್ತದೆ. ದೆಹಲಿಯ ನ್ಯೂರಾಲಜಿಸ್ಟ್ ಡಾ. ರಾಜೇಶ್ ಕುಮಾರ್ ಅವರ ಪ್ರಕಾರ, ಅತಿಯಾಗಿ ಯೋಚಿಸುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಇದು ದೀರ್ಘಕಾಲ ಮುಂದುವರಿದರೆ ದೇಹದಲ್ಲಿನ ಹಾರ್ಮೋನ್ ಸಮತೋಲನಕ್ಕೂ ವ್ಯತ್ಯಾಸ ಉಂಟಾಗಬಹುದು. ಪರಿಣಾಮವಾಗಿ ತಲೆನೋವು, ದಣಿವು ಮತ್ತು ದುರ್ಬಲತೆ ಕಾಣಿಸಬಹುದು.

ಹೆಚ್ಚಾಗಿ ಯೋಚಿಸುವವರಲ್ಲಿ ನಿದ್ರೆ ಸಂಬಂಧಿತ ಸಮಸ್ಯೆಗಳೂ ಕಾಣಿಸಬಹುದು. ತಡವಾಗಿ ನಿದ್ರೆ ಬರುವುದು, ಮಧ್ಯರಾತ್ರಿ ಪದೇ ಪದೇ ಎಚ್ಚರವಾಗುವುದು ಸಾಮಾನ್ಯ ಲಕ್ಷಣಗಳಾಗಿವೆ. ಜೊತೆಗೆ ಈ ಅಭ್ಯಾಸದಿಂದ ಕೆಲಸ ಅಥವಾ ಓದಿನ ಮೇಲೆ ಗಮನ ಕಡಿಮೆಯಾಗಬಹುದು. ಕೆಲವರಲ್ಲಿ ಅಶಾಂತಿ, ಆತಂಕ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ದೀರ್ಘಕಾಲದ ಮಾನಸಿಕ ಒತ್ತಡದಿಂದ ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳೂ ಉಂಟಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಹೆಚ್ಚಾಗಿ ಯೋಚಿಸುವವರಲ್ಲಿ ಸಣ್ಣ ವಿಷಯಗಳಿಗೂ ಅತಿಯಾಗಿ ಚಿಂತೆ ಮಾಡುವುದು, ಮನಸ್ಸನ್ನು ಶಾಂತವಾಗಿಡಲು ಕಷ್ಟವಾಗುವುದು, ಸರಿಯಾದ ನಿದ್ರೆ ಬಾರದಿರುವುದು, ದಣಿವು ಹಾಗೂ ಕೆಲಸದ ಮೇಲೆ ಗಮನ ಕೆಂದ್ರೀಕರಿಸಲು ಆಗದಿರುವುದು ಪ್ರಮುಖ ಲಕ್ಷಣಗಳಾಗಿವೆ.

ಈ ಸಮಸ್ಯೆಯನ್ನು ನಿಯಂತ್ರಿಸಲು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದು ಅಗತ್ಯ. ನಿಯಮಿತವಾಗಿ ವ್ಯಾಯಾಮ, ಯೋಗ ಮತ್ತು ಧ್ಯಾನ ಮಾಡುವುದರಿಂದ ಮನಸ್ಸು ಶಾಂತವಾಗಿರಲು ಸಹಾಯವಾಗುತ್ತದೆ. ಸಾಕಷ್ಟು ನಿದ್ರೆ ಪಡೆಯುವುದು ಮತ್ತು ಸಮತೋಲನಯುತ ದಿನಚರಿಯನ್ನು ಪಾಲಿಸುವುದು ಕೂಡ ಮುಖ್ಯ. ಒತ್ತಡ ಅಥವಾ ಆತಂಕ ದೀರ್ಘಕಾಲ ಮುಂದುವರೆದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!