ವಿಜಯಸಾಕ್ಷಿ ಸುದ್ದಿ, ಗದಗ: ರಾಜೂರ ಗ್ರಾಮದ ಡಾ. ಮಲ್ಲಿಕಾರ್ಜುನ ಕುಂಬಾರ ಅವರ ಸಂಶೋಧನೆಯನ್ನು ಪರಿಗಣಿಸಿ ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡೆಮಿ ಅರಸೀಕೆರಿ ಮೇಲಣಮಠದ ಲಿಂ.ಶ್ರೀ ಎಸ್. ಸಿದ್ದಣ್ಣಯ್ಯ ಮತ್ತು ಗಂಗಮ್ಮ ಸ್ಮಾರಕ ಟ್ರಸ್ಟ್ ನೀಡುವ ‘ನೋಳಂಬ ಶ್ರೀ’ ಪ್ರಶಸ್ತಿ ಪ್ರಕಟಿಸಿದೆ.
ಕರ್ನಾಟಕ ಇತಿಹಾಸ ಅಕಾಡೆಮಿಯ 39ನೇ ಸಮ್ಮೇಳನವು ಗದಗ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ನವೆಂಬರ್ 8, 9 ಮತ್ತು 10ರಂದು ಜರುಗಲಿದೆ. ನ. 8ರಂದು ಜರುಗುವ ಉದ್ಘಾಟನಾ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಡಾ. ಮಲ್ಲಿಕಾರ್ಜುನ ಕುಂಬಾರ ಅವರಿಗೆ ಪ್ರದಾನ ಮಾಡಲಾಗುವುದು.
ಸ್ಥಳೀಯ ಚರಿತ್ರೆಯನ್ನು ಒಳಗೊಂಡಂತೆ ಡಾ. ಮಲ್ಲಿಕಾರ್ಜುನ ಕುಂಬಾರರಿಂದ ಈಗಾಗಲೇ ಸುಮಾರು 20 ಕೃತಿಗಳು ಪ್ರಕಟಗೊಂಡಿವೆ.



