HomeLife Styleಬೆಳಗ್ಗೆ ಎದ್ದ ಕೂಡಲೇ ಬೆಚ್ಚಗಿನ ನೀರು ಕುಡಿಯಿರಿ: ಆಮೇಲೆ ಪ್ರಯೋಜನ ತಿಳಿಯಿರಿ

ಬೆಳಗ್ಗೆ ಎದ್ದ ಕೂಡಲೇ ಬೆಚ್ಚಗಿನ ನೀರು ಕುಡಿಯಿರಿ: ಆಮೇಲೆ ಪ್ರಯೋಜನ ತಿಳಿಯಿರಿ

For Dai;y Updates Join Our whatsapp Group

Spread the love

ಈಗಿನ ಪ್ರತಿಯೊಬ್ಬರು ಬೆಳಗ್ಗೆ ಎದ್ದ ತಕ್ಷಣ ಬೆಡ್ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಹೊಟ್ಟೆಯಲ್ಲಿ ಕೆಫಿನ್ ಅಂಶ ದೇಹ ಸೇರುವುದರಿಂದ ನಂತರದ ದಿನಗಳಲ್ಲಿ ಆರೋಗ್ಯಕ್ಕೆ ಸಾಕಷ್ಟು ಅನಾನುಕೂಲಗಳು ಉಂಟಾಗಲಿವೆ. ಅದರ ಬದಲು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ತುಂಬಾ ಒಳ್ಳೆಯ ಅಭ್ಯಾಸ. ಅದರಲ್ಲೂ ಚಳಿಗಾಲದಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ಬಿಸಿ ನೀರು ಕುಡಿಯುವುದು ದೇಹದಲ್ಲಿ ನಮಗೆ ಗೊತ್ತಿಲ್ಲದೆ ಸಾಕಷ್ಟು ಒಳ್ಳೆಯ ಪ್ರಯೋಜನಗಳನ್ನು ತಂದುಕೊಡುತ್ತದೆ.

ತೂಕ ನಷ್ಟ ನಿಮ್ಮ ಕರುಳಿನ ಆರೋಗ್ಯ ಸುಧಾರಣೆಗೆ ಬಿಸಿ ನೀರು ಸಹಾಯ ಮಾಡುತ್ತದೆ. ಇದು ತೂಕ ತಿಳಿಸಿಕೊಳ್ಳಲು ನೆರವಾಗುತ್ತದೆ. ನಿಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ ಮತ್ತು ವಾತಾವರಣದಿಂದ ಉಂಟಾಗುವ ಆರೋಗ್ಯದ ಏರು-ಪೇರಿನಿಂದ ಸುರಕ್ಷಿತವಾಗಿಡಲು ಬಿಸಿ ನೀರು ಸಹಾಯ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮೂಗು ಕಟ್ಟುವಿಕೆಯಿಂದ ನಿವಾರಣೆ ಶೀತದ ಪ್ರಕೃತಿಯಲ್ಲಿ ಮೂಗು ಕಟ್ಟುವುದು ಸಾಮಾನ್ಯ. ಹಾಗಿರುವಾಗ ಉಸಿರಾಟಕ್ಕೆ ಹೆಚ್ಚು ಸಮಸ್ಯೆಯನ್ನುಂಟು ಮಾಡುತ್ತದೆ. ಬಿಸಿ ನೀರು ಸೇವನೆಯಿಂದ ಮೂಗು ಕಟ್ಟುವಿಕೆ ಸಡಿಲಗೊಳ್ಳುತ್ತದೆ. ಇದರಿಂದ ನೀವು ಸುಲಭದಲ್ಲಿ ಉಸಿರಾಟ ಕ್ರಿಯೆಯನ್ನು ಪ್ರಾರಂಭಿಸಬಹುದು ಎಂದು ಅಧ್ಯಯನಗಳಿಂದಲೂ ತಿಳಿದು ಬಂದಿದೆ.

ರಕ್ತ ಪರಿಚಲನೆ ಬಿಸಿ ನೀರಿನಿಂದ ಸ್ನಾನ ಮಾಡುವುದು ಅಥವಾ ಬಿಸಿ ನೀರು ಕುಡಿಯುವ ಅಭ್ಯಾಸದಿಂದ ರಕ್ತ ಪರಿಚಲನೆಗೆ ಸರಾಗವಾಗುತ್ತದೆ. ಅಪಧಮನಿ ಮತ್ತು ಅಭಿಧಮನಿ ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯಕ. ಹೃದ್ರೋಗಕ್ಕೆ ಸಂಬಂಧಿಸಿದಂತೆ ಯಾವುದೇ ಖಾಯಿಲೆಗಳು ಬಾರದಂತೆ ತಡೆಗಟ್ಟಬಹುದು. ಹಾಗಾಗಿ ಬಿಸಿನೀರು ಸೇವನೆ ಒಳ್ಳೆಯದು ಎಂದು ತಜ್ಞರು ಹೇಳಿದ್ದಾರೆ.

ಹಲ್ಲಿನ ಆರೋಗ್ಯ ಬಿಸಿ ನೀರು ಸೇವನೆ ಹಲ್ಲಿನ ಆರೋಗ್ಯವನ್ನು ಸುಧಾರಿಸುತ್ತದೆ ಜತೆಗೆ ಸ್ವಚ್ಛವಾಗಿರಿಸಿಕೊಳ್ಳಲು ಸಹಾಯಕವಾಗಿದೆ. ತಣ್ಣೀರಿನಿಂದ ಹಲ್ಲು ಉಜ್ಜುವುದು ಸಂವೇದನಾಶೀಲತೆಯನ್ನು ಉಂಟು ಮಾಡಬಹುದು. ದವಡೆಯ ಒಡೆತ ಕಂಡು ಬರುವುದು. ಹಾಗಾಗಿಯೇ ಬಿಸಿ ನೀರಿನಲ್ಲಿ ಹಲ್ಲುಜ್ಜುವ ಅಭ್ಯಾಸವನ್ನು ತಜ್ಞರು ಹೇಳುತ್ತಾರೆ.

ಜೀರ್ಣಕ್ರಿಯೆ ಬಿಸಿನೀರು ಕರುಳಿನಲ್ಲಿರುವ ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಬೆಳಿಗ್ಗೆ ಬೆಸಿ ನೀರು ಸೇವನೆಯು ದಿನಪೂರ್ತಿ ಚಟುವಟಿಕೆಯಿಂದ ಕೂಡಿಸಲು ಸಹಾಯ ಮಾಡುತ್ತದೆ. ರಾತ್ರಿ ಮಲಗುವ ಮುನ್ನು ಒಂದು ಲೋಟ ಬಿಸಿ ನೀರು ಕುಡಿದು ಮಲಗುವುದರಿಂದ ರಾತ್ರಿ ಹಸಿವಾಗುವುದನ್ನು ತಪ್ಪಿಸಬಹುದು ಜತೆಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಸ್ನಾಯುಗಳಿಗೆ ವಿಶ್ರಾಂತಿ ಬಿಸಿ ನೀರು ಸೇವನೆಯು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ಸ್ನಾಯುಗಳು ಬಲಗೊಳ್ಳಲು ಸಹಾಯ ಮಾಡುತ್ತದೆ. ಜತೆಗೆ ಸ್ನಾಯು ಸೆಳೆತ, ಸಂಧಿವಾತದಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.

ಮನಸ್ಸು ನಿಮ್ಮ ಮನಸ್ಸನ್ನು ಹಿಡಿತದಲ್ಲಿಡಲು ಬಿಸಿನೀರು ಸೇವನೆ ಸಹಾಯಕವಾಗಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಮನಸ್ಸಿನ ಏಕಾಗ್ರತೆ ಮತ್ತು ನಿಗ್ರಹ ಮನುಷ್ಯನಿಗೆ ಅತ್ಯವಶ್ಯಕ. ಹಾಗಾಗಿ ಬಿಸಿನೀರು ಸೇವಿಸುವದರಿಂದ ಮನಸ್ಸು ಚುರುಕಾಗುತ್ತದೆ ಜತೆಗೆ ಆರೋಗ್ಯವೂ ಸುಧಾರಿಸುತ್ತದೆ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!