ಗದಗ: ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತದ ಪರಿಣಾಮ ಓರ್ವ ಸಾವನ್ನಪ್ಪಿ, ಇಬ್ಬರಿಗೆ ಗಾಯಗಳಾಗಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ರಾಜೂರು ಬಳಿ ನಡೆದಿದೆ. ಮದುವೆ ಕಾರ್ಯ ಮುಗಿಸಿ ಲಿಂಗಸಗೂರಿನಿಂದ ಸೂಡಿಗೆ ಬರುತ್ತಿದ್ದ ವೇಳೆ ಈ ಅಪಘಾತ ನಡೆದಿದೆ.
ಘಟನೆಯಲ್ಲಿ ಗಣಪತಿ ಭಟ್ (70) ಮೃತ ವ್ಯಕ್ತಿಯಾಗಿದ್ದು, ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ಕಿರಣ್, ವೈಷ್ಣವಿ ಭಟ್ ಗೆ ಗಾಯಗಳಾಗಿದೆ. ಇನ್ನೂ ಗಾಯಾಳುಗಳನ್ನ ಜಿಮ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ನಿದ್ರೆ ಮಂಪರಿಯಲ್ಲಿ ಕಾರ್ ನಿಯಂತ್ರಣ ತಪ್ಪಿದ ಬಗ್ಗೆ ಅನುಮಾನವಿದ್ದು, ಗಜೇಂದ್ರಗಡ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



