Homecultureದಸರಾ ಧರ್ಮ ಧ್ವಜಾರೋಹಣ

ದಸರಾ ಧರ್ಮ ಧ್ವಜಾರೋಹಣ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಅಡವೀಂದ್ರ ಸ್ವಾಮಿ ಮಠದಲ್ಲಿ ಅ.3 ರಿಂದ 12ರವರೆಗೆ ಜರುಗಲಿರುವ ದಸರಾ ಮಹೋತ್ಸವದ 44ನೇ ವರ್ಷದ ಶ್ರೀದೇವಿ ಪುರಾಣ ಪ್ರವಚನ ಹಾಗೂ 10ನೇ ವರ್ಷದ ಅನ್ನಪೂರ್ಣೆಶ್ವರಿ ದೇವಿಯ ಮಹಾರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಧರ್ಮ ಧ್ವಜಾರೋಹಣ ನೆರವೇರಿಸುವ ಮೂಲಕ ಆರಂಭಿಸಲಾಯಿತು.

ಅಡ್ನೂರ-ಗದುಗಿನ ಪೂಜ್ಯ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ, ಶ್ರೀಮಠದ ಧರ್ಮದರ್ಶಿ ಪೂಜ್ಯ ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಅವರ ಸಮ್ಮುಖದಲ್ಲಿ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಪಲ್ಲೇದ ಧ್ವಜಾರೋಹಣ ನೆರವೇರಿಸಿದರು.

ಜಾತ್ರಾ ಮಹೋತ್ಸವದ ಮಹಿಳಾ ಸಮಿತಿಯ ಅಧ್ಯಕ್ಷೆ ಲೀಲಾವತಿ ಬಿಳೇಯಲಿ, ಪೂಜಾ ಸಮಿತಿಯ ಅಧ್ಯಕ್ಷ ಶರಣಯ್ಯ ಶಾಸ್ತ್ರಿ ಶಿವಪ್ಪಯ್ಯನಮಠ, ಶಿವಾನುಭವ ಗೋಷ್ಠಿ ಸಮಿತಿ ಅಧ್ಯಕ್ಷ ಡಾ. ಎಸ್.ಕೆ. ನಾಲತ್ವಾಡಮಠ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ವಾಣಿಜ್ಯ ತೆರಿಗೆ ಅಧಿಕಾರಿ ರಾಜಶೇಖರಯ್ಯ ಕಾಲವಾಡಮಠ, ಭಾರತಿ ಕಾಲವಾಡಮಠ, ಪ್ರಾಚಾರ್ಯ ಎಸ್.ಎ. ಅವಾರಿ ಪಾಲ್ಗೊಂಡಿದ್ದರು.

ಜಾತ್ರಾ ಮಹೋತ್ಸವದ ಪ್ರಧಾನ ಕಾರ್ಯದರ್ಶಿ ಯು.ಆರ್. ಭೂಸನೂರಮಠ ಸ್ವಾಗತಿಸಿದರು, ಶಾರದಾ ಬೊಮ್ಮಸಾಗರ ನಿರೂಪಿಸಿದರು. ಸಿದ್ಧಣ್ಣ ಜವಳಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!