HomeGadag Newsಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷರ ಆಯ್ಕೆ

ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷರ ಆಯ್ಕೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿ ಗದಗ ವಿಧಾನಸಭಾ ಕ್ಷೇತ್ರದ ಗದಗ ಗ್ರಾಮೀಣ ಮಂಡಲದ ನೂತನ ಅಧ್ಯಕ್ಷರಾಗಿ ಹೊಸಳ್ಳಿ ಗ್ರಾಮದ ಹಾಲುಮತ ಸಮಾಜದ ಬೂದಪ್ಪ ಶಂಕ್ರಪ್ಪ ಹಳ್ಳಿ ಅವರನ್ನು ಪಕ್ಷದ ಹಿರಿಯರ ಮತ್ತು ಗದಗ ಗ್ರಾಮೀಣ ಮಂಡಲ ಕೋರ್ ಕಮಿಟಿ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ. ಸಂಕನೂರ, ಚುನಾವಣಾಧಿಕಾರಿಗಳಾದ ಶಶಿಮೌಳಿ ಕುಲಕರ್ಣಿ, ಸಹ ಚುನಾವಣಾಧಿಕಾರಿಗಳಾದ ಎಂ.ಎಸ್. ಕರಿಗೌಡ್ರ, ಮಾಜಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ, ಗ್ರಾಮೀಣ ಭಾಗದ ಪ್ರಮುಖರುಗಳಾದ ಬಿ.ಎಸ್. ಚಿಂಚಲಿ, ಭದ್ರೇಶ ಕುಸ್ಲಾಪೂರ, ನಾಗರಾಜ ಕುಲಕರ್ಣಿ, ದ್ಯಾಮಣ್ಣ ನೀಲಗುಂದ, ಸಿದ್ದು ಪಲ್ಲೇದ, ನಿಂಗಪ್ಪ ಹುಗ್ಗಿ, ಬಾಬು ಸುಂಕದ, ಅಶೋಕ ಕರೂರ, ಪ್ರಭಣ್ಣ ಗೋಡಿ, ರಾಜಕುಮಾರ ಕಟ್ಟಿಮನಿ, ಮುತ್ತಪ್ಪ ಮೂಲಿಮನಿ, ಮಂಜುನಾಥಸ್ವಾಮಿ ಹಿರೇಮಠ, ರವಿ ವಗ್ಗನವರ, ಸುರೇಶ ಹೆಬಸೂರ, ಮಂಜುನಾಥ ಶಾಂತಗೇರಿ, ಮೋಹನ ಕೋರಿ, ಸಿದ್ದಪ್ಪ ಈರಗಾರ, ಮಂಜುನಾಥ ಈರಗಾರ, ಸುರೇಶ ಶಿವಳ್ಳಿ, ವಿನೋದ ಹಂಸನೂರ ಮುಂತಾದವರಿದ್ದರು.

ಇದೇ ಸಂದರ್ಭದಲ್ಲಿ ಗ್ರಾಮೀಣ ಮಂಡಲ ಹಿಂದಿನ ಅಧ್ಯಕ್ಷರಾದ ದ್ಯಾಮಣ್ಣ ನೀಲಗುಂದರಿಂದ ನೂತನ ಅಧ್ಯಕ್ಷ ಬೂದಪ್ಪ ಹಳ್ಳಿ ಅವರಿಗೆ ಪಕ್ಷದ ಧ್ವಜ ಹಸ್ತಾಂತರಿಸಲಾಯಿತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!