ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರದ ಹಾಳದಿಬ್ಬ ಓಣಿಯಲ್ಲಿ ಮಾರ್ಚ್ 14ರಂದು ಹೋಳ್ಳಿ ಹುಣ್ಣಿಮೆ ನಿಮಿತ್ತ 5 ದಿನಗಳ ಕಾಲ ಕಾಮರತಿ ದೇವಿಯರನ್ನು ಪ್ರತಿಷ್ಠಾಪಿಸಿ ಐದನೇ ದಿನದಂದು ರಂಗಪಂಚಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು.
ಈ ನಿಟ್ಟಿನಲ್ಲಿ ಹಾಳದಿಬ್ಬ ವಿವಿಧೋದ್ದೇಶಗಳ ಸೇವಾ ಸಂಸ್ಥೆಯ ವತಿಯಿಂದ 2025ನೇ ಸಾಲಿನ ಕಾಮರತಿ ಉತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಅಶೋಕ ಮಂದಾಲಿ, ಅಧ್ಯಕ್ಷರಾಗಿ ಯಲ್ಲನಗೌಡ ದೇಸಾಯಿ, ಉಪಾಧ್ಯಕ್ಷರಾಗಿ ಉಪೇಂದ್ರ ಹುಯಿಲಗೊಳ, ಖಜಾಂಚಿಯಾಗಿ ಕಿರಣ ಹಿರೇಮಠ, ಕಾರ್ಯದರ್ಶಿಯಾಗಿ ರಾಕೇಶ ನವಲಗುಂದ, ಸಂಪರ್ಕ ಪ್ರಮುಖರಾಗಿ ಸಾಗರ ಹುಯಿಲಗೋಳ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹಾಳದಿಬ್ಬ ವಿವಿಧೋದ್ದೇಶಗಳ ಸೇವಾ ಸಂಸ್ಥೆಯ ಅಧ್ಯಕ್ಷ ಕುಮಾರ ಮಂದಾಲಿಯವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.



