ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕದ ಅಧಿಕಾರ ಪದಗ್ರಹಣ ಸಮಾರಂಭವು ಸಂಸ್ಥೆಯ ಶ್ರೀ ಬನಪ್ಪ ಸಂಕಪ್ಪ ಸಂಕಣ್ಣವರ ಸಭಾ ಭವನದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಘಟಕದ ಅಧ್ಯಕ್ಷರಾದ ನಂದಾ ಚಂದ್ರು ಬಾಳಿಹಳ್ಳಿಮಠ ವಹಿಸಿದ್ದರು.
ಒಂದು ವರ್ಷದಲ್ಲಿ ಕೈಗೊಂಡ ಕಾರ್ಯಕಲಾಪಗಳ ವರದಿಯನ್ನು ಮಹಿಳಾ ಘಟಕದ ಗೌರವ ಕಾರ್ಯದರ್ಶಿಗಳಾದ ಜ್ಯೋತಿ ರಾಮನಗೌಡ ದಾನಪ್ಪಗೌಡ್ರ ಮಂಡಿಸಿ ಒಪ್ಪಿಗೆ ಪಡೆದು. ನಂತರ ಲೆಕ್ಕ ಪತ್ರದ ವರದಿಯನ್ನು ಮಹಿಳಾ ಘಟಕ ಕೋಶಾಧ್ಯಕ್ಷರಾದ ಪೂರ್ಣಿಮಾ ಕೆ. ಆಟದ ಮಂಡಿಸಿ ಒಪ್ಪಿಗೆ ಪಡೆದರು.
2025-2026ನೇ ಸಾಲಿಗೆ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಜ್ಯೋತಿ ರಾಮನಗೌಡ ದಾನಪ್ಪಗೌಡ್ರ ಅಧಿಕಾರ ವಹಿಸಿಕೊಂಡರು. ಪ್ರಥಮ ಉಪಾಧ್ಯಕ್ಷರಾಗಿ ಸುಜಾತಾ ಶರಣಬಸಪ್ಪ ಗುಡಿಮನಿ, ದ್ವಿತೀಯ ಉಪಾಧ್ಯಕ್ಷರಾಗಿ ನಾಗರತ್ನಾ ಎಸ್. ಮುಳಗುಂದ, ತೃತೀಯ ಉಪಾಧ್ಯಕ್ಷರಾಗಿ ಪಾರ್ವತಿ ಪಶುಪತಯ್ಯ ಶಾಬಾದಿಮಠ, ಗೌರವ ಕಾರ್ಯದರ್ಶಿಗಳಾಗಿ ಪೂರ್ಣಿಮಾ ಕೆ. ಆಟದ, ಸಹ ಗೌರವ ಕಾರ್ಯದರ್ಶಿಗಳಾಗಿ ಸುಧಾ ಚನ್ನವೀರಪ್ಪ ಹುಣಸಿಕಟ್ಟಿ, ಶಿಲ್ಪಾ ತೋಂಟೇಶ ವೀರಲಿಂಗಯ್ಯನಮಠ, ಕೋಶಾಧ್ಯಕ್ಷರಾಗಿ ರೇಣುಕಾ ಲಿಂಗರಾಜ ಅಮಾತ್ಯ ಅಧಿಕಾರ ಸ್ವೀಕರಿಸಿದರು.
ಮುಖ್ಯ ಅತಿಥಿಗಳಾಗಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾದ ಶರಣಬಸಪ್ಪ ಸಂಗಪ್ಪ ಗುಡಿಮನಿ ಪಾಲ್ಗೊಂಡು ಮಾತನಾಡಿದರು. ಶರಣಬಸಪ್ಪ ಸಂಗಪ್ಪ ಗುಡಿಮನಿ ಹಾಗೂ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯಿಂದ ಅಂತರರಾಷ್ಟ್ರೀಯ ಮಹಿಳಾ ಉದ್ದಿಮೆದಾರರ ಸಮ್ಮೇಳನದಲ್ಲಿ ಪ್ರಶಸ್ತಿ ಪುರಸ್ಕೃತರಾದ ಪಾರ್ವತಿ ಪಶುಪತಯ್ಯ ಶಾಬಾದಿಮಠರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಹಿಳಾ ಘಟಕದ ಮಾಜಿ ಅಧ್ಯಕ್ಷರಾದ ಸುವರ್ಣ ಸದಾಶಿವಯ್ಯ ಮದರಿಮಠ ನಿರೂಪಿಸಿದರು. ಕೊನೆಯಲ್ಲಿ ಮಹಿಳಾ ಘಟಕದ ಮಾಜಿ ಅಧ್ಯಕ್ಷರಾದ ಜಯಶ್ರೀ ತಾತನಗೌಡ ಪಾಟೀಲ ವಂದಿಸಿದರು.



