HomeGadag Newsಶಿವಕಾಳಿಮಠ-ಗಾಣಿಗೇರ ಅವಿರೋಧ ಆಯ್ಕೆ

ಶಿವಕಾಳಿಮಠ-ಗಾಣಿಗೇರ ಅವಿರೋಧ ಆಯ್ಕೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದುಗಿನ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾಗಿರುವ ಶಿವಸಂಗಮ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ನಿಯಮಿತದ ಆಡಳಿತ ಮಂಡಳಿಗೆ 2024-2029ರ ಅವಧಿಗೆ ಶುಕ್ರವಾರ ಸಂಘದ ಕಾರ್ಯಾಲಯದಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆ ಜರುಗಿತು.
ಅಧ್ಯಕ್ಷರಾಗಿ ವೀರಯ್ಯ ಶಿವಲಿಂಗಯ್ಯ ಶಿವಕಾಳಿಮಠ, ಉಪಾಧ್ಯಕ್ಷರಾಗಿ ಮಹೇಶ ಗಿರಿಯಪ್ಪ ಗಾಣಿಗೇರ, ನಿರ್ದೆಶಕರಾಗಿ ಪ್ರಶಾಂತ ದೇಸಾಯಿಮಠ, ಮುರಿಗೆಪ್ಪ ಲಿಂಗದಾಳ, ಗಿರಿಯಪ್ಪ ಗಾಣಿಗೇರ, ಕಳಕಪ್ಪ ನಾಗರಾಳ, ಸುರೇಶ ಸರ್ವಿ, ಶೋಭಾ ಶಿವಕಾಳಿಮಠ, ಕವಿತಾ ದೇಸಾಯಿಮಠ, ಗೀತಾ ಪಲ್ಲೇದ, ಸರೋಜಾ ಲಿಂಗದಾಳ ಎ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿಗಳು ಅಧಿಕೃತವಾಗಿ ಘೋಷಿಸಿ ಅವರಿಗೆ ಪ್ರಮಾಣಪತ್ರ ವಿತರಿಸಿ ಅಭಿನಂದಿಸಿದರು.
ಈ ನೂತನ ಆಡಳಿತ ಮಂಡಳಿಯಲ್ಲಿ ಕಳಕಪ್ಪ ತಿಪ್ಪಣ್ಣ ನಾಗರಾಳ ಅವರು ನೂತನ ನಿರ್ದೆಶಕರಾಗಿ ಆಯ್ಕೆಯಾಗಿದ್ದನ್ನು ಬಿಟ್ಟರೆ ಉಳಿದವರೆಲ್ಲರೂ ಅದೇ ಸ್ಥಾನದಲ್ಲಿ ಈ ಮೊದಲಿನ ಎರಡು ಅವಧಿಯಲ್ಲಿಯೂ ಸಹ ಅವಿರೋಧವಾಗಿ ಆಯ್ಕೆಯಾಗಿದ್ದರು.
ಚುನಾವಣಾ ರಿಟರ್ನಿಂಗ್ ಅಧಿಕಾರಿಯಾಗಿ ನರಗುಂದ ಸಹಕಾರಿ ಸಂಘಗಳ ಲೆಕ್ಕಪರಿಶೋಧನೆ ಸಹಾಯಕ ನಿರ್ದೆಶಕರಾದ ಶ್ರೀನಿವಾಸ ನಾಗೇಂದ್ರ ಅವರು ಚುನಾವಣೆಯ ಎಲ್ಲ ಪ್ರಕ್ರಿಯೆಗಳನ್ನು ಜರುಗಿಸಿದರು.
ಶಿರಹಟ್ಟಿಯ ಸಹಕಾರ ಸಂಘಗಳ ಲೆಕ್ಕಪರಿಶೋಧನೆಯ ಹಿರಿಯ ಲೆಕ್ಕಪರಿಶೋಧಕರಾದ ಎಂ.ವ್ಹಿ.ಚುರ್ಚಿಹಾಳ ಮತ್ತು ರೋಣದ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಮುಧೋಳ ಅವರು ಚುನಾವಣಾ ಸಹಾಯಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಸಹಕಾರಿ ಸಂಘದ ಸಂಸ್ಥಾಪಕ ಜಿ.ಎಂ. ಪಲ್ಲೇದ ಅವರು ಸಂಸ್ಥೆ ನಡೆದು ಬಂದ ದಾರಿ ವಿವರಿಸಿ, ಆಡಳಿತ ಹಾಗೂ ಸಿಬ್ಬಂದಿ ವರ್ಗದ ಪರಿಶ್ರಮ ಮತ್ತು ಜನರು ಸಂಸ್ಥೆಯ ಮೇಲಿಟ್ಟಿರುವ ವಿಶ್ವಾಸದಿಂದಾಗಿ ಸಂಸ್ಥೆ ಪ್ರಗತಿಪಥದಲ್ಲಿ ಮುನ್ನಡೆದಿದೆ ಎಂದರು.
ಅವಿರೋಧವಾಗಿ ಆಯ್ಕೆಗೊಂಡ ನೂತನ ಅಧ್ಯಕ್ಷ ವ್ಹಿ.ಎಸ್. ಶಿವಕಾಳಿಮಠ ಹಾಗೂ ಉಪಾಧ್ಯಕ್ಷ ಎಂ.ಜಿ. ಗಾಣಿಗೇರ ಅವರು ಎಲ್ಲ ನಿರ್ದೆಶಕರ ವಿಶ್ವಾಸದೊಂದಿಗೆ, ಸಿಬ್ಬಂದಿಯ ನಿಷ್ಠೆಯ ಕರ್ತವ್ಯ ನಿರ್ವಹಣೆಯೊಂದಿಗೆ ಸಂಸ್ಥೆಯನ್ನು ಇನ್ನೂ ಅಭಿವೃದ್ದಿಯತ್ತ ಸಾಗಿಸುವ ಭರವಸೆ ನೀಡಿ ಜನತೆಯ ವಿಶ್ವಾಸ ಸಹಕಾರವನ್ನು ಕೋರಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಎಸ್.ಎಂ. ಸರ್ವಿ, ವ್ಯವಸ್ಥಾಪಕ ಬಿ.ಎಂ. ಹಳ್ಳಿಕೇರಿ ಸೇರಿದಂತೆ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡವರು ಸಹಕಾರಿ ತತ್ವದಡಿ ಸಂಸ್ಥೆಯನ್ನು ಚೆನ್ನಾಗಿ ಮುನ್ನಡೆಸಲಿ. ಸಂಸ್ಥೆಗೆ ಒಳ್ಳೆಯ ಹೆಸರಿದೆ, ಉತ್ತಮ ಆಡಳಿತಕ್ಕೆ ಈಗಾಗಲೇ ಪ್ರಶಸ್ತಿ ಪಡೆದುಕೊಂಡಿದ್ದು, ಬರಲಿರುವ ದಿನಮಾನಗಳಲ್ಲಿ ರಾಜ್ಯದಲ್ಲಿಯೇ ಅತ್ಯುತ್ತಮ ಸಂಸ್ಥೆಯಾಗಿ ಹೊರಹೊಮ್ಮಲಿ ಎಂದು ಚುನಾವಣಾಧಿಕಾರಿಗಳು ಶುಭ ಹಾರೈಸಿದರು.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!