ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಸೂರಣಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶಂಕ್ರಣ್ಣ ಶೀರನಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೂರಣಗಿ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಚನ್ನಮ್ಮ ಕಳ್ಳಿಹಾಳ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಬುಧವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಶಂಕ್ರಣ್ಣ ಶೀರನಹಳ್ಳಿ ಹಾಗೂ ಪ್ರವೀಣ ಸೂರಣಗಿ ನಾಮಪತ್ರ ಸಲ್ಲಿಸಿದ್ದರು. ಒಟ್ಟು 20 ಸದಸ್ಯರನ್ನು ಹೊಂದಿರುವ ಗ್ರಾ.ಪಂ ಚುನಾವಣೆಯಲ್ಲಿ ಓರ್ವ ಸದಸ್ಯರು ಗೈರಾಗಿದ್ದರು. ಪ್ರವೀಣ ಸೂರಣಗಿ ನಾಮಪತ್ರ ವಾಪಾಸ್ ಪಡೆದಿದ್ದರಿಂದ ಚುನಾವಣಾಧಿಕಾರಿ ಕೃಷ್ಣಪ್ಪ ಧರ್ಮರ ಶಂಕ್ರಣ್ಣ ಶೀರನಹಳ್ಳಿ ಅವರ ಆಯ್ಕೆ ಘೋಷಿಸಿದರು. ಅಧ್ಯಕ್ಷರಾಗಿ ಆಯ್ಕೆಯಾದ ಶಂಕ್ರಣ್ಣ ಶೀರನಹಳ್ಳಿ ಅವರು ಮಾತನಾಡಿ, ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪಕ್ಷಾತೀತ, ಜಾತ್ಯಾತೀತವಾಗಿ ಎಲ್ಲ ಸದಸ್ಯರ ಸಹಕಾರದೊಂದಿಗೆ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಯಲ್ಲವ್ವ ಚಕ್ರಸಾಲಿ, ಚನ್ನಮ್ಮ ಕಳ್ಳಿಹಾಳ, ಹೆಗ್ಗಪ್ಪ ಹರಿಜನ, ಸುಮಂಗಲಾ ಮೇಲ್ಮುರಿ, ಶೇಖವ್ವ ದೊಡಗಣ್ಣವರ, ಪ್ರಕಾಶ ಶೀರನಹಳ್ಳಿ, ಲಕ್ಷ್ಮವ್ವ ಲಮಾಣಿ, ಸುಶೀಲಾ ಲಮಾಣಿ, ಫೀರಸಾಬ ರಿತ್ತಿ, ಕೋಟೆಪ್ಪ ವರ್ದಿ, ಶರಣಪ್ಪ ಇಚ್ಚಂಗಿ, ಬಾಬಣ್ಣ ಲಮಾಣಿ, ಹುಸೇನಸಾಬ ಕೋಲಕಾರ, ಶಂಕ್ರಪ್ಪ ದುರ್ಗದ, ಶಿವಾನಂದ ಲಮಾಣಿ ಮುಂತಾದವರಿದ್ದರು.



