HomeGadag Newsಮಹಿಳೆಯನ್ನು ಎಲ್ಲರೂ ಗೌರವಿಸಬೇಕು: ಮಹಾರಾಜ ನಿರಂಜನಜಗದ್ಗುರು ಫಕ್ಕೀರ ದಿಂಗಾಲೇಶ್ವರ ಮಹಾಸ್ವಾಮೀಜಿ

ಮಹಿಳೆಯನ್ನು ಎಲ್ಲರೂ ಗೌರವಿಸಬೇಕು: ಮಹಾರಾಜ ನಿರಂಜನಜಗದ್ಗುರು ಫಕ್ಕೀರ ದಿಂಗಾಲೇಶ್ವರ ಮಹಾಸ್ವಾಮೀಜಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಅನಾದಿ ಕಾಲದಿಂದಲೂ ಮಹಿಳೆಗೆ ವಿಶೇಷ ಸ್ಥಾನವಿದೆ. ಮಹಿಳೆಯರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಶಿರಹಟ್ಟಿ ಫಕ್ಕೀರೇಶ್ವರಮಠದ ಮಹಾರಾಜ ನಿರಂಜನಜಗದ್ಗುರು ಫಕ್ಕೀರ ದಿಂಗಾಲೇಶ್ವರ ಮಹಾಸ್ವಾಮೀಜಿ ಹೇಳಿದರು.

ಅವರು ಪಟ್ಟಣದ ಗ್ರಾಮದೇವತಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಜರುಗಿದ ಪುರಾಣ ಪ್ರವಚನದ ಮಹಾಮಂಗಲೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಾವು ಜಾತಿ, ಮತ, ಲಿಂಗ, ಸಿರಿ-ಸಂಪತ್ತು ಎಂದು ಭೇದ ಭಾವ ಮಾಡದೇ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣಬೇಕು. ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸಬೇಕು. ಮಕ್ಕಳನ್ನು ನಾಡಿನ ಉತ್ತಮ ಪ್ರಜೆಗಳನ್ನಾಗಿ ಮಾಡುವ ಶಕ್ತಿ ನಮ್ಮಲ್ಲೇ ಅಡಕವಾಗಿರುತ್ತದೆ. ದೇವಿ ಪುರಾಣ ಆಲಿಸುವುದರಿಂದ ನಮ್ಮಲ್ಲಿನ ದುರ್ಗುಣಗಳು ನಾಶವಾಗುತ್ತವೆ ಎಂದರು.

ನೀಲಗುಂದ ಗುದ್ದೇಶ್ವರಮಠದ ಪ್ರಭುಲಿಂಗ ದೇವರು ಮಾತನಾಡಿ, ದೇವಿ ಪುರಾಣವೆಂದರೆ ನಮ್ಮ ದೇಹದ ಪುರಾಣವಾಗಿದ್ದು, ನಮ್ಮಲ್ಲಿರುವ ದುಷ್ಟ ಶಕ್ತಿಗಳನ್ನು ನಿಗ್ರಹಿಸಲು ಸಹಕಾರಿಯಾಗಿದೆ. 31 ವರ್ಷಗಳ ಕಾಲ ಪುರಾಣ ಪ್ರವಚನವನ್ನು ಪಂಚಾಕ್ಷರಯ್ಯ ಮರಿದೇವರಮಠ ನಡೆಸಿಕೊಂಡು ಬಂದಿರುವ ಕಾರ್ಯ ಶ್ಲಾಘನೀಯ ಎಂದರು.

ಮಂಗಳ ನುಡಿಯನ್ನು ವೇ.ಮೂ ಪಂಚಾಕ್ಷರಯ್ಯ ಮರಿದೇವರಮಠ ನುಡಿದರು. ಕಾಶೀನಾಥ ಮರಿದೇವರಮಠ ಪುರಾಣ ಪಠಣ ಮಾಡಿದರು. ಶಂಕ್ರಪ್ಪ ಮಡ್ಡಿ ಸಂಗಡಿಗರಿಂದ ಸಂಗೀತ ಸೇವೆ ಜರುಗಿತು. ವೀರಪ್ಪ ಸಿದ್ದನಗೌಡರ ಹಾಗೂ ಪುರಾಣ ಪ್ರವಚನದಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಎಸ್.ಸಿ. ಬಡ್ನಿ ವಹಿಸಿದ್ದರು. ಅಶೋಕ ಸೋನಗೋಜಿ, ಬಸವರಾಜ ಹಾರೋಗೇರಿ, ರಾಮಣ್ಣಾ ಕಮಾಜಿ, ಮಾಹಾಂತೇಶ ನೀಲಗುಂದ, ನಾಗರಾಜ ದೇಶಪಾಂಡೆ, ಮಾಹಾದೇವಪ್ಪ ಗಡಾದ, ಪರಸಪ್ಪ ಸಂಗನಪೇಟಿ, ಗಂಗಪ್ಪ ಸುಂಕಾಪೂರ, ಮೌನೇಶ ನೀಲಗುಂದ, ಶಿವಾನಂದ ಬಸರಿಮರದ, ಚನ್ನಬಸಯ್ಯ ಹಿರೇಮಠ ಇದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!