ಬೆಂಗಳೂರು: 2011ರಿಂದಲೂ ಇವಿಎಂಗಳನ್ನು ದುರ್ಬಳಕೆ ಮಾಡಿಕೊಂಡೇ ಬರುತ್ತಿದ್ದಾರೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, 2011ರಿಂದಲೂ ಇವಿಎಂಗಳನ್ನು ದುರ್ಬಳಕೆ ಮಾಡಿಕೊಂಡೇ ಬರುತ್ತಿದ್ದಾರೆ. ಬರೀ ಇವಿಎಂ ಮಾತ್ರವಲ್ಲ ಚುನಾವಣೆ ಅಂದರೆ ಬಿಜೆಪಿಯವರಿಗೆ ಅಕ್ರಮ. ಪ್ರತಿ ಹಂತದಲ್ಲೂ ಅಕ್ರಮ ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ಇನ್ನೂ ಜರ್ಮನಿ, ಜಪಾನ್ ದೇಶದಲ್ಲಿ ಇವಿಎಂ ಮಿಷನ್‌ಗಳನ್ನು ತಯಾರು ಮಾಡುತ್ತಾರೆ. ಆದರೆ ಅಲ್ಲೇ ಇದನ್ನ ಬಳಕೆ ಮಾಡಲ್ಲ. ಹಾಗೆಯೇ ಅಮೆರಿಕ ಲಂಡನ್ನಲ್ಲೂ ಇವಿಎಂ ಬಳಕೆ ಮಾಡಲ್ಲ. ನಮ್ಮ ದೇಶದಲ್ಲಿ ಇವಿಎಂ ಬಳಕೆಯನ್ನ ನಮ್ಮ ಪಕ್ಷವೇ ಜಾರಿಗೆ ತಂದಿದ್ದು, ಆದರೆ ಅದನ್ನ ಬಿಜೆಪಿಯವರು ಅಕ್ರಮಕ್ಕೆ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.



