HomeGadag Newsರಾಷ್ಟ್ರ ಮಟ್ಟದ ಕರಾಟೆ ಪಂದ್ಯದಲ್ಲಿ ಸಾಧನೆ

ರಾಷ್ಟ್ರ ಮಟ್ಟದ ಕರಾಟೆ ಪಂದ್ಯದಲ್ಲಿ ಸಾಧನೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಡಾವಣಗೇರಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಗದುಗಿನ ಚೇತನ ಕರಾಟೆ ಕ್ಲಬ್‌ನ 27 ಕರಾಟೆ ಪಟುಗಳು ಭಾಗವಹಿಸಿ ಅತ್ಯತ್ತುಮ ಕರಾಟೆ ಪ್ರದರ್ಶನ ನೀಡಿದರು.

ಕ್ಲಬ್‌ನ ಕರಾಟೆ ಪಟುಗಳಾದ ಸುಮಂತ್ ಡಿ.ಮೆಣಸಿನಕಾಯಿ ಕಟಾ ಪ್ರಥಮ, ಕುಮಿತೆ ದ್ವಿತೀಯ, ಪೃಥ್ವಿ ಎಂ.ಭೂಮಕ್ಕನವರ್ ಕಟಾ ತೃತೀಯ, ವೈಷ್ಣವಿ ಸಿ. ಹಿರೇಮಠ ಕಟಾ ತೃತೀಯ, ಕುಮಿತೆ ತೃತೀಯ ಸ್ಥಾನ, ಶ್ರವಣ ಟಿ.ಜಿ ಕಟಾ ಪ್ರಥಮ, ಕುಮಿತೆ ಪ್ರಥಮ, ಅನುಷಾ ಸಿ.ಪಾಲನಕರ ಕಟಾ ತೃತೀಯ, ಕುಮಿತೆ ತೃತೀಯ, ವಿಕಾಸ್ ಎನ್.ಬಡಿಗೇರ್ ಕಟಾ ದ್ವಿತೀಯ, ಕುಮಿತೆ ಚತುರ್ಥ, ಖುಷಿ ಕೆ.ವೆರ್ಣೆಕರ ಕಟಾ ಪ್ರಥಮ, ಕುಶಾಲ್ ಕೆ.ವೆರ್ಣೆಕರ ಕಟಾ ದ್ವಿತೀಯ, ಕುಮಿತೆ ಪ್ರಥಮ, ಸಮರ್ಥ ಹಳ್ಳಿಕೇರಿ ಕುಮಿತೆ ದ್ವಿತೀಯ, ಕಟಾ ಪ್ರಥಮ, ರೋಹಿತ್ ಪೊಲೀಸ್‌ಪಾಟೀಲ್ ಕುಮಿತೆ ಪ್ರಥಮ, ಕಟಾ ದ್ವಿತೀಯ, ಪುನೀತ್ ಮುದೇನಗುಡಿ ಕಟಾ ತೃತೀಯ, ಸಾನ್ವಿ ಪೂಜಾರ ಕಟಾ ತೃತೀಯ, ಕುಮಿತೆ ತೃತೀಯ ಸ್ಥಾನ ಪಡೆದರು.

ವಿಜಯನಾದಯ್ಯ ಗುಡಿಮಠ ಕಟಾ ತೃತೀಯ, ಸಿದ್ದು ಕೆಂಗಾರ್ ಕಟಾ ಪ್ರಥಮ, ಕುಮಿತೆ ತೃತೀಯ, ವಿಫುಲ್ ಶಿದ್ಲಿಂಗ ಕಟಾ ತೃತೀಯ, ಕುಮಿತೆ ತೃತೀಯ, ಪೃಥ್ವಿ ಕಟಾ ತೃತೀಯ, ಪೂರ್ವಿ ಶಿದ್ಲಿಂಗ ಕಟಾ ತೃತೀಯ, ಕುಮಿತೆ ತೃತೀಯ, ಪ್ರಣವ ಶಿದ್ಲಿಂಗ ಕಟಾ ದ್ವಿತೀಯ, ಸಾತ್ವಿಕ ಹೂಗಾರ ಕಟಾ ತೃತೀಯ ಸ್ಥಾನ ಗಳಿಸಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಪಂಚಮುಖಿ ದೇವಸ್ಥಾನ ಹಾಗೂ ಚೇತನ ಕರಾಟೆ ಕ್ಲಬ್‌ನ ಅಧ್ಯಕ್ಷ ಜಿ.ಎಲ್. ಮೇರವಾಡೆ, ರಾಘವೇಂದ್ರ ಹುಲಕೋಟಿ, ತರಬೇತುದಾರರಾದ ಪಿ.ಎಸ್. ಹಬೀಬ ಗುರುಗಳು, ಪಾಲಕರಾದ ಕಿರಣ ವೆರ್ಣೇಕರ, ತರಬೇತುದಾರರಾದ ಚೇತನ ಹಬೀಬ, ಶಿವಾಜಿ ಗಡಾದ, ಗಂಗಾಧರ ಸಾಸ್ವಿಹಳ್ಳಿ, ವಿನಾಯಕ ಗುರನ್ನವರ, ಅಮೃತ ಭಾಂಡಗೆ, ದ್ಯಾಮಪ್ಪ ದಾವೇರಿ, ಪ್ರವೀಣ ಕಾಂಬ್ಳೆ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು, ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!