ಬೆಂಗಳೂರು: ತೆಲುಗು ನಟ ಜ್ಯೂ.ಎನ್‌ಟಿಆರ್ ಅವರಿಗಾಗಿ ಅಭಿಮಾನಿಗಳ ಕ್ರೇಜ್ ಮತ್ತೊಮ್ಮೆ ಗೋಚರಿಸಿದ್ದು, ಬೆಂಗಳೂರುದಲ್ಲಿ ಭಾರೀ ಜನಸ್ತೋಮ ಕಂಡುಬಂದಿದೆ.
ನಗರದ ಮಹದೇವಪುರದಲ್ಲಿರುವ ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮಕ್ಕೆ ಜ್ಯೂ.ಎನ್‌ಟಿಆರ್ ಭಾಗವಹಿಸಿದ್ದರು. ಈ ವೇಳೆ ಸಾವಿರಾರು ಅಭಿಮಾನಿಗಳು ನಟನನ್ನು ನೋಡಲು ಆಸ್ಪತ್ರೆಗೆ ಧಾವಿಸಿದರು.
ಅಭಿಮಾನಿಗಳ ನೂಕುನುಗ್ಗಲಿನಿಂದ ಆಸ್ಪತ್ರೆಯೊಳಗೆ ಗೊಂದಲ ಉಂಟಾಗಿ, ಎಸ್ಕಲೇಟರ್ ಮುರಿದು ಹಾನಿಗೊಳಗಾಗಿದೆ.
ಜನಸ್ತೋಮ ಹೆಚ್ಚಾಗುತ್ತಿದ್ದಂತೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು. ನಿಯಂತ್ರಣಕ್ಕೆ ಬರದಿದ್ದರಿಂದ ಲಘು ಲಾಠಿಚಾರ್ಜ್ ನಡೆಸಿ ಜನರನ್ನು ಚದುರಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.



