ಕಲಬುರಗಿ:- ನಕಲಿ ಅಂಕಪಟ್ಟಿ ಕೊಟ್ಟು ಅರಣ್ಯ ವೀಕ್ಷಕ ಹುದ್ದೆ ಗಿಟ್ಟಿಸಿಕೊಂಡಿದ್ದ ವ್ಯಕ್ತಿ ವಿರುದ್ದ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ನಿವಾಸಿ ಬೀರಪ್ಪನ ಎಂಬಾತ 2014 ರ ಎಪ್ರಿಲ್‌ನಲ್ಲಿ SSLC ಯಲ್ಲಿ 318 ಅಂಕ ಗಳಿಸಿದ್ದ. ಆದರೆ ಈತ ಕೆಲಸ ಗಿಟ್ಟಿಸಿಕೊಳ್ಳಲು 605 ಅಂಕ ತೋರಿಸುವ ನಕಲಿ ಅಂಕಪಟ್ಟಿ ಕೊಟ್ಟು ಅರಣ್ಯ ವೀಕ್ಷಕ ಹುದ್ದೆ ಗಿಟ್ಟಿಸಿಕೊಂಡಿದ್ದ. ಅರಣ್ಯ ಇಲಾಖೆ ನೇರ ನೇಮಕಾತಿ ಹಿನ್ನಲೆಯಲ್ಲಿ 2023 ರ ಡಿಸೆಂಬರ್ 21 ರಂದು ಆನ್‌ಲೈನ್ ಮೂಲಕ ಅರ್ಜಿ ಹಾಕಿದ್ದು, ಅಸಲಿ ಮರೆಮಾಚಿ, ನಕಲಿ ಅಂಕಪಟ್ಟಿ ತೋರಿಸಿ ಇಲಾಖೆಗೆ ಯಾಮಾರಿಸಿದ್ದ. ಬಳಿಕ ಶಿಕ್ಷಣ ಇಲಾಖೆಯಿಂದ ದಾಖಲೆಗಳ ಪರಿಶೀಲನೆ ಮಾಡುವ ವೇಳೆ ಈತನ ಕೃತ್ಯ ಬಯಲಿಗೆ ಬಂದಿದೆ.
ಹೀಗಾಗಿ ಬೀರಪ್ಪನ ವಿರುದ್ಧ FIR ದಾಖಲಾಗಿದ್ದು, ಜೈಲು ಸೇರುವ ಸ್ಥಿತಿಗೆ ಬಂದಿದ್ದಾನೆ.



