HomeEntertainmentಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲಯಾಳಂ ಸಿನಿಮಾದ ಶೂಟಿಂಗ್‌ ಗೆ ಅವಕಾಶ ನೀಡಿದ ಅರಣ್ಯ ಇಲಾಖೆ

ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲಯಾಳಂ ಸಿನಿಮಾದ ಶೂಟಿಂಗ್‌ ಗೆ ಅವಕಾಶ ನೀಡಿದ ಅರಣ್ಯ ಇಲಾಖೆ

For Dai;y Updates Join Our whatsapp Group

Spread the love

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ವ್ಯಾಪ್ತಿಯಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲಯಾಳಂ ಚಿತ್ರ ಚಿತ್ರದ ಶೂಟಿಂಗ್‌ ನಡೆಯುತ್ತಿದ್ದು ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಬೆಟ್ಟದ ತಪ್ಪಲಿನಲ್ಲಿ ಸಿನಿಮಾದ ಶೂಟಿಂಗ್‌ ಮಾಡಲು ಅನುಮತಿ ಇದೆಯೋ ಇಲ್ಲವೋ ಎಂಬ ಪ್ರಶ್ನೆ ಎದುರಾಗಿದ್ದು ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.

ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲಯಾಳ ಸಿನಿಮಾದ ಶೂಟಿಂಗ್‌ ಗೆ ಅಲ್ಲಿನ ಅರಣ್ಯ ಇಲಾಖೆ ಅನುಮತಿ ನೀಡಿರುವುದು ಇದೀಗ ಗೊತ್ತಾಗಿದೆ. ‘ಪೆನ್ನು ಕೇಸ್​’ ಎಂಬ ಹೆಸರಿನ ಚಿತ್ರತಂಡಕ್ಕೆ ಶೂಟಿಂಗ್​​ಗೆ ಅನುಮತಿ ನೀಡಲಾಗಿದೆ. ಅಶ್ವಥಿ ನಡುತೋಡಿ ನಿರ್ಮಾಣದ, ಫೆಬಿನ್​ ಸಿದ್ಧಾರ್ಥ್​ ನಿರ್ದೇಶನದ ‘ಪೆನ್ನು ಕೇಸ್​’ ಚಿತ್ರದಲ್ಲಿ ನಿಖಿಲ್ ವಿಮಲ್, ಹಕಿಮ್ ಶಜಹನ್ ಅಭಿನಯಿಸುತ್ತಿದ್ದಾರೆ. ಸಿನಿಮಾ ತಂಡದವರು ಬಂಡೀಪುರ ಟೈಗರ್ ಕನ್ಸರವೇಷನ್​​ ಫೌಂಡೇಷನ್​ಗೆ 1 ಲಕ್ಷ ಹಣ ನೀಡಿದ್ದಾರೆ ಎಂಬುದು ಇದೀಗ ಗೊತ್ತಾಗಿದೆ. ಅರಣ್ಯಾಧಿಕಾರಿ ಪ್ರಭಾಕರನ್​ ಶೂಟಿಂಗ್​ಗೆ ಅನುಮತಿ ನೀಡಿದ್ದಾರೆ.

ಹುಲಿ ಸಂರಕ್ಷಿತ ವಲಯದಲ್ಲಿ ಚಿತ್ರೀಕರಣ ಮಾಡಲು ಮಲಯಾಳಂ ಸಿನಿಮಾಗೆ ನೀಡಲು ಅವಕಾಶ ಕೊಟ್ಟಿದ್ದೇಕೆ ಎನ್ನುವ ಪ್ರಶ್ನೆ ಮೂಡಿದೆ. ನಿಷೇಧಿತ ವಲಯ ಎಂದು ಗೊತ್ತಿದ್ದರೂ ಸಹ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿದ್ದು ಚರ್ಚೆ ಹುಟ್ಟುಹಾಕಿದೆ. ಇದು ವಿವಾದಕ್ಕೆ ಮೂಲಕ ಕಾರಣ.

ಬಂಡೀಪುರ ಅರಣ್ಯ ಮುಖ್ಯಸ್ಥ ಪ್ರಭಾಕರನ್ ಅವರು ಈವರೆಗೆ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ವಿವಾದವಾಗುತ್ತಿದ್ದಂತೆ ಅವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟ ಇರೋದು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ. ಈ ಭಾಗದಲ್ಲಿ ಸಿನಿಮಾ ಶೂಟ್ ಮಾಡುವಂತಿಲ್ಲ. ‘ಚಿತ್ರದ ಶೂಟಿಂಗ್​ಗೆ ಅನುಮತಿ ಕೊಟ್ಟಿದ್ದು ನಿಜ. ಆದರೆ, ದೇವಾಲಯದ ಆವರಣದಲ್ಲಿ  ಮಾತ್ರ ಶೂಟ್ ಮಾಡಲು ಅನುಮತಿ ನೀಡಲಾಗಿದೆ’ ಎಂದು ಅರಣ್ಯ ಇಲಾಖೆ ಹೇಳುತ್ತಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!