HomeGadag Newsಸರಕಾರಿ ಶಾಲೆಗಳು ಸಬಲೀಕರಣವಾಗಲಿ : ಆರ್.ಎಸ್. ಬುರಡಿ

ಸರಕಾರಿ ಶಾಲೆಗಳು ಸಬಲೀಕರಣವಾಗಲಿ : ಆರ್.ಎಸ್. ಬುರಡಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸಂಘ-ಸಂಸ್ಥೆಗಳು ಆಗಾಗ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ವಿವಿಧ ಚಟುವಟಿಕೆ ಆಧಾರಿತ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರೋತ್ಸಾಹಿಸಬೇಕು. ಅಂದಾಗ ಸರಕಾರಿ ಶಾಲೆಗಳ ಸಬಲೀಕರಣ ಆಗುವದು ಎಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಅಭಿಪ್ರಾಯಪಟ್ಟರು.
ಅವರು ಬೆಟಗೇರಿ ಸರಕಾರಿ ಶಾಲೆ ನಂ.6ರಲ್ಲಿ ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ದತ್ತುಶಾಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರಿ ಶಾಲೆಗಳನ್ನು ಸದೃಢಗೊಳಿಸಲು ಈಗಾಗಲೇ ಹಲವಾರು ಯೋಜನೆಗಳು ಜಾರಿಯಾಗಿದ್ದು, ಮುಖ್ಯವಾಗಿ ಸಮುದಾಯ ಹಾಗೂ ಸಂಘ-ಸಂಸ್ಥೆಗಳು ಸರಕಾರಿ ಶಾಲೆಗಳನ್ನು ದತ್ತು ಪಡೆಯುವ ಮೂಲಕ ಉತ್ತೇಜನ ನೀಡಬೇಕು ಎಂದರು.
ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ನಾಗರತ್ನಾ ಮಾರನಬಸರಿ ಮಾತನಾಡಿ, ಗದಗ ಶಹರದ ಸರಕಾರಿ ಶಾಲೆಗಳಾದ ಆಶ್ರಯ ಕಾಲೋನಿಯ ನಂ. 12 ಹಾಗೂ ಬೆಟಗೇರಿ ನಂ. 6 ಶಾಲೆಯನ್ನು ಇನ್ನರ್‌ವ್ಹೀಲ್ ಕ್ಲಬ್‌ನಿಂದ ದತ್ತು ಪಡೆಯಲಾಗಿದ್ದು ಶೈಕ್ಷಣಿಕ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಿಡಿಸಿ ಪ್ರೇಮಾ ಗುಳಗೌಡ ಮಾತನಾಡಿದರು. ಶಾಂತಾ ಮುಂದಿನಮನಿ ಪ್ರಾರ್ಥಿಸಿದರು, ಕ್ಲಬ್‌ನ ಕಾರ್ಯದರ್ಶಿ ವೀಣಾ ತಿರ್ಲಾಪೂರ ಕ್ಲಬ್‌ನ ಕಾರ್ಯಚಟುವಟಿಕೆ ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯೆ ವೀಣಾ ಮುತಾಲಿಕ್‌ದೇಸಾಯಿ ಸ್ವಾಗತಿಸಿದರು. ಸುವಣಾ ವಸ್ತçದ ಪರಿಚಯಿಸಿದರು, ಮೀನಾಕ್ಷಿ ಕೊರವನವರ ನಿರೂಪಿಸಿದರು. ಪುಷ್ಪಾ ಭಂಡಾರಿ ವಂದಿಸಿದರು.
ಕ್ಲಬ್‌ನ ಮಾಜಿ ಅಧ್ಯಕ್ಷರುಗಳಾದ ರಾಜೇಶ್ವರಿ ಬಳ್ಳಾರಿ, ಶ್ರೇಯಾ ಪವಾಡಶೆಟ್ಟರ, ಅನ್ನಪೂರ್ಣ ವರವಿ, ಸದಸ್ಯರಾದ ಜಯಶ್ರೀ ಉಗಲಾಟ, ನಂದಾ ಬಾಳಿಹಳ್ಳಿಮಠ, ಮಂಜುಳಾ ಅಕ್ಕಿ, ಅಶ್ವಿನಿ ಜಗತಾಪ, ಜ್ಯೋತಿ ದಾನಪ್ಪಗೌಡ್ರ, ಸಾಗರಿಕಾ ಅಕ್ಕಿ, ಸುವರ್ಣಾ ಮದರಿಮಠ, ಪ್ರತಿಭಾ ಭದ್ರಶೆಟ್ಟಿ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಲೀಟರೇಚರ್ ಕಮಿಟಿ ಚೇರಮನ್ ಸುಮಾ ಪಾಟೀಲ ಮಾತನಾಡಿ, ಇತ್ತೀಚೆಗೆ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕಡಿಮೆಯಾಗಿದ್ದು ಕಳವಳಕಾರಿ. ಪ್ರತಿಭಾನ್ವಿತ ಶಿಕ್ಷಕರ ಬಳಗ, ಉತ್ತಮ ಬೋಧನೆ, ಸೌಲಭ್ಯಗಳನ್ನು ಸರಕಾರ ಒದಗಿಸಿದ್ದರೂ ಪಾಲಕರು ಆಸಕ್ತಿ ತೋರುತ್ತಿಲ್ಲ. ಅದಕ್ಕಾಗಿ ಇನ್ನರ್‌ವ್ಹೀಲ್ ಕ್ಲಬ್ ಸರಕಾರಿ ಶಾಲೆಗಳನ್ನು ದತ್ತು ಪಡೆದು ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡುತ್ತಿದೆ ಎಂದರು.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!