ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಕ್ಕಸ ಬೀದಿ ನಾಯಿಗಳ ಹಾವಳಿ ಜೋರಾಗಿದೆ. ರಸ್ತೆಯಲ್ಲಿ ಹೋಗುವವರ ಮೇಲೆ ಅಟ್ಯಾಕ್ ಮಾಡುತ್ತಿದ್ದ ಡೆಡ್ಲಿ ಡಾಗ್ಸ್ಗೆ ಕಡಿವಾಣ ಹಾಕಲು ಜಿಬಿಎ ಬಿರಿಯಾನಿ ಭಾಗ್ಯ ತಂದಿದೆ. ಇದೀಗ ಒಂದು ಬಾರಿ ಅಲ್ಲ ಬದಲಿಗೆ ದಿನಕ್ಜೆ ಏರಡು ಬಾರಿ ಬಡೂಟ ಹಾಕಲು ಪ್ಲಾನ್ ಮಾಡಲಾಗಿದೆ.
ಹೌದು ಈ ಮೊದಲು ಕೇವಲ ಒಂದು ಬಾರಿ ಮಾತ್ರ ಚಿಕನ್ ರೈಸ್ ನೀಡುತ್ತಿದ್ದರೂ ಆದರೆ ಈ ಕುರಿತು ಸಾರ್ವಜನಿಕರಿಂದ ಕೇಳಿ ಬಂದ ಆಕ್ಷೇಪದಿಂದಾಗಿ ಈಗ ಅದನ್ನು ದಿನಕ್ಕೆ ಎರಡು ಬಾರಿ ಮಾಡಲು ಅಧಿಕಾರಿಗಳು ನಿರ್ಧಾರ ತೆಗೆದುಕೊಂಡಿದ್ದಾರೆ.
ಈಗಾಗಲೇ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬೀದಿ ನಾಯಿಗಳನ್ನ ಸೆರೆ ಹಿಡಿದು ಅವುಗಳಿಗೆ ಶೆಲ್ಟರ್ ವ್ಯವಸ್ಥೆ ಮಾಡಲು ಜಿಬಿಎ ತಯಾರಿ ನಡೆಸಿದೆ. ಇದರ ಜೊತೆಗೆ ಇದೀಗ ಬೀದಿ ನಾಯಿಗಳಿಗೆ ದಿನಕ್ಕೆ ಎರಡು ಬಾರಿ ಚಿಕನ್ ಬಿರಿಯಾನಿ ನೀಡಲು ಸಹ ತಯಾರಿ ನಡೆದಿದೆ.
ಇನ್ನೂ ಕಳೆದ ಬಾರಿ ಒಂದು ಹೊತ್ತಿನ ಊಟಕ್ಕೆ 22 ರೂ. ನಿಗದಿ ಪಡಿಸಲಾಗಿತ್ತು. ಆದರೆ ಇದೀಗ ಮತ್ತೆ ಮೂರು ರೂ. ಹೆಚ್ಚಳ ಮಾಡಿದ್ದು, ಒಂದು ಹೊತ್ತಿನ ಊಟದ ಬೆಲೆ 25ರೂ ನಿಗದಿ ಮಾಡಲಾಗಿದೆ. ಅಂದರೆ ಎರಡು ಹೊತ್ತಿನ ಊಟಕ್ಕೆ 50ರೂ ನಿಗದಿ ಪಡಿಸಲಾಗಿದೆ.
ಇನ್ನೂ ಒಂದು ಹೊತ್ತಿನ ಊಟದಲ್ಲಿ 150 ಗ್ರಾಂ ಅಕ್ಕಿ ಹಾಗೂ 100 ಗ್ರಾಂ ಚಿಕನ್ ಅನ್ನು ಬೀದಿನಾಯಿಗಳಿಗೆ ನೀಡಲಾಗುತ್ತೆ. ಮಾಸಿಕ ಪ್ರತಿ ನಾಯಿಗೆ 3,035 ರೂ ವೆಚ್ಚವಾಗಲಿದೆ. ಜೊತೆಗೆ ಸಿಬ್ಬಂದಿ ವೇತನ, ಔಷಧಿ, ಸ್ವಚ್ಚತೆ, ವೆಚ್ಚ ಎಲ್ಲಾ ಸೇರಿ 3 ಸಾವಿರದ 36 ರೂ. ಆಗಲಿದ್ದು,
ಈ ಪ್ರಕಾರ ಬೀದಿ ನಾಯಿಗಳ ಆರೈಕೆಗೆ ಸರಿಸುಮಾರು ಒಂದು ತಿಂಗಳಿಗೆ 66 ಲಕ್ಷ 95 ಸಾವಿರ ರೂ ಖರ್ಚು ಆಗಲಿದೆ. ವರ್ಷಕ್ಕೆ ಲೆಕ್ಕ ಹಾಕಿದರೆ ಸರಿಸುಮಾರು 8.5 ಕೋಟಿಗೂ ಅಧಿಕ ಹಣವನ್ನ ಜಿಬಿಎ ವೆಚ್ಚ ಮಾಡಬೇಕಿದೆ. ಇದಕ್ಕೆ ಬೆಂಗಳೂರಿಗರು ಆಕ್ರೋಶ ವ್ಯಕ್ತಪಡಿಸ್ತಿದ್ದು, ಹಣ ಮಾಡಲು ಈ ಕೆಲಸ ಮಾಡುತ್ತಿದ್ದಾರೆ ಎಂದು ಕಾಂತ್ ರಾಜ್ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



