HomeGadag Newsಮಕ್ಕಳಿಗೆ ಮನೆಯಿಂದಲೇ ಉತ್ತಮ ಸಂಸ್ಕಾರ ನೀಡಿ: ಆನಂದ ಬದಿ

ಮಕ್ಕಳಿಗೆ ಮನೆಯಿಂದಲೇ ಉತ್ತಮ ಸಂಸ್ಕಾರ ನೀಡಿ: ಆನಂದ ಬದಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಎಸ್‌ಎಸ್‌ಕೆ ಸಮಾಜದವರು ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ನಗರಸಭೆಯ ಪರಿಸರ ಅಭಿಯಂತರ ಆನಂದ ಬದಿ ಹೇಳಿದರು.

ನಗರದ ಹಳೇ ಸರಾಫ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಬಾಸ್ಕರಸಾ ಪವಾರ ಸಭಾಂಗಣದ ದಸರಾ ದರ್ಬಾರ ವೇದಿಕೆಯಲ್ಲಿ ಜರುಗಿದ ನಮ್ಮೂರ ದಸರಾ-2025ರ 8ನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕಡುಬಡತನದಲ್ಲಿ ಬೆಳೆದ ನನಗೆ ಉನ್ನತ ಶಿಕ್ಷಣ ಪಡೆಯಲು ಸಮಾಜದ ಮಾಜಿ ಅಧ್ಯಕ್ಷರಾದ ದಿ. ಆರ್.ಎನ್. ಬಾಕಳೆ ಸೇರಿದಂತೆ ಸಮಾಜದ ಹಿರಿಯರು ಆರ್ಥಿಕ ನೆರವು ನೀಡಿ ಬೆಳೆಸಿದ್ದರಿಂದ ನಾನು ಇಂದು ಸರ್ಕಾರಿ ನೌಕರನಾಗಿ ಉತ್ತಮ ಹುದ್ದೆಯಲ್ಲಿದ್ದು ಸೇವೆ ಮಾಡುತ್ತಿದ್ದೇನೆ. ಅಂದು ನನಗೆ ಸಮಾಜದ ಹಿರಿಯರು ಪ್ರೋತ್ಸಾಹಿಸದೆ ಇದ್ದರೆ ಇಂದು ನಾನು ಹೀಗೆ ಇರುತ್ತಿರುಲಿಲ್ಲ. ಆದ್ದರಿಂದ ಸಮಾಜದ ಯುವಕರು ಉನ್ನತ ಶಿಕ್ಷಣ ಪಡೆದು ಸಮಾಜದ ಋಣ ತಿರಿಸಿಬೇಕು ಎಂದು ಹೇಳಿದರು.

ಎಸ್‌ಎಸ್‌ಕೆ ಸಮಾಜದ ಪಂಚ ಕಮಿಟಿ ಅಧ್ಯಕ್ಷ ಫಕೀರಸಾ ಬಾಂಡಗೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಉಪಾಧ್ಯಕ್ಷ ರಾಜು ಬದಿ, ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ, ರವಿ ಶಿದ್ಲಿಂಗ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪಂಚ ಕಮಿಟಿ ಸದಸ್ಯರಾದ ಸುರೇಶಕುಮಾರ ಬದಿ, ಪರಶುರಾಮ ಬದಿ, ಬಲರಾಮ ಬಸವಾ, ವಿಷ್ಣುಸಾ ಶಿದ್ಲಿಂಗ, ಮಾರುತಿ ಪವಾರ, ಪ್ರಕಾಶ ಬಾಕಳೆ, ಶ್ರೀನಿವಾಸ ಬಾಂಡಗೆ, ಅಂಬಾಸಾ ಖಟವಟೆ, ವಿನೋದ ಬಾಂಡಗೆ, ತರುಣ ಸಂಘದ ವಿಶ್ವನಾಥಸಾ ಸೋಳಂಕಿ, ರಾಘು ಬಾರಡ, ಶ್ರೀಕಾಂತ ಬಾಕಳೆ, ಸುಧೀರ ಕಾಟಿಗರ, ನಾಗರಾಜ ಖೋಡೆ, ಮಹಿಳಾ ಮಂಡಳದ ಅಧ್ಯಕ್ಷೆ ಉಮಾಬಾಯಿ ಬೇವಿನಕಟ್ಟಿ, ಗೀತಾಬಾಯಿ ಹಬೀಬ ಮುಂತಾದವರಿದ್ದರು.

ಅನಿಲ್ ಖಟವಟೆ ಸ್ವಾಗತಿಸಿದರು. ಜಿ.ಎನ್. ಹಬೀಬ ನಿರೂಪಿಸಿದರು. ಮೋತಿಲಾಲಸಾ ಪೂಜಾರಿ ವಂದಿಸಿದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಕೆ ಸಮಾಜದ ಕೃಷ್ಣಪ್ರಿಯಾ ಆನಂದಸಾ ಬದಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ನಡೆದ ರಾಜ್ಯಮಟ್ಟದ ಕಲಾಶ್ರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ದೆಹಲಿಗೆ ತೆರಳುತ್ತಿರುವದರಿಂದ ಅವರನ್ನು ಹಾಗೂ ಇವರ ಸಹೋದರಿಯಾದ ತನುಶ್ರೀ ಆನಂದಸಾ ಬದಿ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಶುಭ ಹಾರೈಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!