ಸೀರಿಯಲ್ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ವಾರದ 7 ದಿನವೂ ಧಾರವಾಹಿಗಳನ್ನು ಪ್ರಸಾರ ಮಾಡಲು ಕಲರ್ಸ್ ವಾಹಿನಿ ದಿಟ್ಟ ನಿರ್ಧಾರ ಮಾಡಿದೆ.
ಕನ್ನಡದ ಬಿಗ್ ಬಾಸ್ 11ರ ಜೊತೆ ಹಲವು ಸೀರಿಯಲ್‌ಗಳ ಮೂಲಕ ವಾಹಿನಿ ಮನರಂಜನೆ ನೀಡುತ್ತಿದೆ. ಹೊಸ ಕಥೆಗಳನ್ನು ಕೊಡುವ ಮೂಲಕ ಪ್ರೇಕ್ಷಕರ ಮನಗೆಲ್ಲುತ್ತಿದೆ. ಹೀಗಿರುವಾಗ ಪ್ರೇಕ್ಷಕರಿಗಾಗಿ ವಾಹಿನಿ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದೆ.
ಇಷ್ಟು ದಿನ ವಾಹಿನಿಯ ಸೀರಿಯಲ್‌ಗಳು 7 ದಿನಗಳು ಪ್ರಸಾರ ಕಾಣುತ್ತಿರಲಿಲ್ಲ. ಆದರೆ ಇನ್ಮೇಲೆ ವೀಕ್ಷಕರ ನೆಚ್ಚಿನ ಶೋಗಳು ವಾರದ ಏಳು ದಿನಗಳು ಪ್ರಸಾರವಾಗಲಿದೆ. ಈ ಗುಡ್ ನ್ಯೂಸ್ ಅನ್ನು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ತಿಳಿಸಿದೆ.
ಶ್ರೀಗೌರಿ, ‘ಲಕ್ಷ್ಮಿ ಬಾರಮ್ಮ’, ‘ನಿನಗಾಗಿ’, ‘ಕರಿಮಣಿ’, ‘ದೃಷ್ಟಿ ಬೊಟ್ಟು’ ಹೀಗೆ ಪ್ರೇಕ್ಷಕರ ಇಷ್ಟದ ಸೀರಿಯಲ್‌ಗಳನ್ನು ವಾರ ಪೂರ್ತಿ ನೋಡುವ ಅವಕಾಶ ಸಿಗುತ್ತಿದೆ.



