ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮನೋರಮಾ ಮಹಾವಿದ್ಯಾಲಯವು ಶೈಕ್ಷಣಿಕ ಸಾಲಿನ ಬಿ.ಕಾಂ ಕೋರ್ಸಿನ 4ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದೆ.
ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ತೌಸಿಫ ಮುಲ್ಲಾ (676 ಅಂಕ) ಪ್ರಥಮ ಸ್ಥಾನ, ಹಾಗೂ ಫೈನಾನ್ಸಿಯಲ್ ಮ್ಯಾನೇಜ್‌ಮೆಂಟ್ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾನೆ. ತೇಜಸ್ವಿನಿ ಮೆಣಸಿನಕಾಯಿ (646 ಅಂಕ) ದ್ವಿತೀಯ ಸ್ಥಾನ, ಹರಿಹರನ ಚಂದ್ರಶೇಖರ (640 ಅಂಕ) ತೃತೀಯ ಸ್ಥಾನ, ವಿಜಯಲಕ್ಷ್ಮೀ ಕಾಗಿ (607 ಅಂಕ) 4ನೇ ಸ್ಥಾನ, ಪ್ರಜ್ವಲ ಮೆಣಸಿನಕಾಯಿ (598 ಅಂಕ) 5ನೇ ಸ್ಥಾನ ಪಡೆದಿದ್ದಾರೆ.
ಮಹಾವಿದ್ಯಾಲಯದ ಫಲಿತಾಂಶ 100ಕ್ಕೆ 100ರಷ್ಟು ಆಗಿದೆ. ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಚೇರಮನ್ ಎನ್.ಎಮ್. ಕುಡತರಕರ, ಪ್ರಾಚಾರ್ಯ ಬಿ.ಎಸ್. ಹಿರೇಮಠ, ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಕುಡತರಕರ, ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ಸಂಸ್ಥೆಯ ನಿರ್ದೇಶಕರಾದ ಸಂಜಯ ಕುಡತರಕರ, ಚೇತನ ಕುಡತರಕರ, ಸಂಯೋಜಕರಾದ ಪ್ರೊ. ಅಲ್ವಿನಾ ಡಿ ಹಾಗೂ ಸಿಬ್ಬಂದಿ ವರ್ಗದವರು ಶ್ಲಾಘಿಸಿದ್ದಾರೆ.



