ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಕೇಂದ್ರ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಎಂ ಅಧ್ಯಕ್ಷತೆಯಲ್ಲಿ ಸದ್ಭಾವನಾ ದಿನದ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಪ್ರತಿಜ್ಞಾ ವಿಧಿಯನ್ನು ವಿ.ಎಫ್. ಬಿಜಾಪೂರ ಭೋದಿಸಿದರು.
ಕಾರ್ಯಕ್ರಮದಲ್ಲಿ ಇಲಾಖಾ ಮುಖ್ಯಸ್ಥರಾದ ಇಮಾಮಕಾಸೀಮ್ ಕಂದಗಲ್, ಜಗದಂಬಾ ಕೋಪರ್ಡೆ, ಬಿ.ಬೋರಯ್ಯ, ಶಶೀಧರ ಕುಂಬಾರ, ಎಸ್.ವಿ. ಅಂಗಡಿ, ಜಿ. ಶ್ರೀನಾಥ, ಅಧಿಕಾರಿಗಳಾದ ಎಂ.ಬಿ. ಕಪಲಿ, ಸುನೀಲ್ ಎಂ, ಕೃಷ್ಣಾನಂದ ಭಟ್, ಸುಮನಾ ಯು, ರವಿ ಅಂಚಿಗಾವಿ, ನವೀನಕುಮಾರ ತಿಪ್ಪಾ, ಜಗದೀಶ ಕೋಳಿ, ಗುರುಪ್ರಸಾದ ಹೋಗಾಡಿ ಸೇರಿದಂತೆ ಸಂಸ್ಥೆಯ ಇನ್ನಿತರ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು.



