ವಿಜಯಸಾಕ್ಷಿ ಸುದ್ದಿ, ಗದಗ: ಸಮುದಾಯದ ಏಳಿಗೆಗೆ ಸಹಕಾರ ಸಂಘ ಉಪಯುಕ್ತವಾಗಿದೆ. ಸ್ವಾಭಿಮಾನದ ಬದುಕು ಕಟ್ಟಿಕೊಡಲು ಸಹಕಾರಿಯಾಗಿದೆ. ತಾವೆಲ್ಲ ಪದಾಧಿಕಾರಿಗಳು ಸಂಸ್ಥೆಯನ್ನು ಸಮರ್ಥವಾಗಿ ಬೆಳೆಸಿ. ನಾವೆಲ್ಲರೂ ಸಹಕಾರ ಹಾಗೂ ಶಕ್ತಿ ತುಂಬುತ್ತೇವೆ ಎಂದು ಕಾನೂನು, ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗದುಗಿನಲ್ಲಿ ಇತ್ತೀಚೆಗೆ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಪತ್ತಿನ ಸಹಕಾರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನೋರಮಾ ಕಾಲೇಜಿನ ಪ್ರಾಚಾರ್ಯ ಬಿ.ಎಸ್. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನ ನಿಜಶರಣ ಅಂಬಿಗರ ಚೌಡಯ್ಯನವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂಗಮೇಶ ಹಾದಿಮನಿ ವಹಿಸಿದ್ದರು. ಈ ಸಂದರ್ಭದಲ್ಲಿ ಎಚ್.ಕೆ. ಪಾಟೀಲ ಸೇವಾ ತಂಡದ ಅಧ್ಯಕ್ಷ ಪ್ರಭು ಬುರಬುರೆ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಗದಗ ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಕಾಂಗ್ರೆಸ್ ಮೀನುಗಾರರ ವಿಭಾಗದ ಜಿಲ್ಲಾಧ್ಯಕ್ಷ ಗುರಪ್ಪ ತಿರ್ಲಾಪೂರ, ನಿಜಶರಣ ಅಂಬಿಗರ ಚೌಡಯ್ಯನವರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಹರೀಶ ಬಾರಕೇರ, ನಿರ್ದೇಶಕರಾದ ಮಂಜುನಾಥ ಗುಡಿಸಾಗರ, ಮಧುಶೇಖರ ಪೂಜಾರ, ಅಮಿತ ಪೂಜಾರ, ಸೋನಿಯಾ ನಿಡಗುಂದಿ, ಬಸವರಾಜ ಮೊಕಾಶಿ, ರವಿಕುಮಾರ ಗುಡಿಸಾಗರ, ಮುಖ್ಯ ಕಾರ್ಯನಿರ್ವಾಹಕ ಭುವನೇಶ್ವರಿ ಹಾದಿಮನಿ, ಸುಜಾತ ಗುಡಿಸಾಗರ, ಸೌಮ್ಯ ಸುಣಗಾರ, ಕವಿತಾ ಗುಡಿಸಾಗರ, ಚಂದ್ರಕಾಂತ ಬಾರಕೇರ, ಲಕ್ಷ್ಮಿ ಹರೀಶ ಬಾರಕೇರ, ಪುಷ್ಪಾ ನಿಡಗುಂದಿ, ರವಿಕುಮಾರ ನಿಡಗುಂದಿ, ಗಿರಿಜಾ ಬಾರಕೇರ, ಸಮಾಜದ ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.
ಪ್ರೊ. ಹೇಮಂತ ದಳವಾಯಿ ಸ್ವಾಗತಿಸಿದರು.



