ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಣ ಪ್ರೇಮಿ, ತ್ಯಾಗಜೀವಿ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ ಗದಗ, ಅಣ್ಣಿಗೇರಿ ಗುರುಗಳ 6ನೇ ಪುಣ್ಯಸ್ಮರಣೆ ಮತ್ತು ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ‘ಗುರುಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ ಸೆ. 5ರಂದು ಮಧ್ಯಾಹ್ನ 3 ಗಂಟೆಗೆ ಗದುಗಿನ ಶ್ರೀ ಬಿ.ಜಿ.ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಜರುಗಲಿದೆ.
ಸಾನ್ನಿಧ್ಯವನ್ನು ಜ. ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸುವರು. ಗದುಗಿನ ಸಂಸ್ಕೃತ ವಿದ್ವಾನ್ ಎನ್.ಎನ್. ಭಟ್ ಅವರಿಗೆ `ಗುರುಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಮುಖ್ಯ ಅತಿಥಿಗಳಾಗಿ ಡಾ. ಅರವಿಂದ ಕರಿನಾಗಣ್ಣವರ, ನಿವೃತ್ತ ಪ್ರಾಚಾರ್ಯ ಎಸ್.ಬಿ. ಹಿರೇಮಠ, ಶ್ರೀನಿವಾಸ ಸುರೇಬಾನ, ಡಾ. ಐ.ಬಿ. ಕೊಟ್ಟೂರಶೆಟ್ಟಿ ಹಾಗೂ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಆಗಮಿಸುವರು. ಪ್ರತಿಷ್ಠಾನದ ಸರ್ವ ಪದಾಧಿಕಾರಿಗಳು, ನಿರ್ದೆಶಕರು ಉಪಸ್ಥಿತರಿರುವರು ಎಂದು ಕಾರ್ಯದರ್ಶಿ ಸುಭಾಸಚಂದ್ರ ಬೆಟದೂರ ತಿಳಿಸಿದ್ದಾರೆ.



