HomeGadag Newsನೆಮ್ಮದಿಯ ಜೀವನಕ್ಕೆ ಆರೋಗ್ಯ ಮುಖ್ಯ

ನೆಮ್ಮದಿಯ ಜೀವನಕ್ಕೆ ಆರೋಗ್ಯ ಮುಖ್ಯ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಜನವರಿ ತಿಂಗಳಲ್ಲಿ ಜನಿಸಿದ ಸಂಘದ ಸದಸ್ಯರ ಹುಟ್ಟುಹಬ್ಬ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿವೃತ್ತ ನೌಕರರ ಸಂಘದ ಆಜೀವ ಸದಸ್ಯರೂ ಆದ  ಪಾಲ್ಗೊಂಡು ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ಸುಖ, ಶಾಂತಿ, ನೆಮ್ಮದಿಯ ಜೀವನ ಸಾಡಾ. ಸಿ.ಬಿ. ಹಿರೇಗೌಡರಗಿಸಲು ಉತ್ತಮ ಆರೋಗ್ಯ ಬೇಕು. ಉತ್ತಮವಾದ ಆರೋಗ್ಯಕ್ಕಿಂತ ಬೇರೆ ಸಂಪತ್ತು ಬೇಕಿಲ್ಲ. ಪ್ರತಿಯೊಬ್ಬರೂ ಆರೋಗ್ಯದಿಂದಿದ್ದರೇ ಮಾತ್ರ ಕೌಟುಂಬಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ ಸೇರಿದಂತೆ ಎಲ್ಲ ಸುಖಗಳನ್ನು ಅನುಭವಿಸಲು ಸಾಧ್ಯ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಗಮನವಿಡಬೇಕು. ವೈದ್ಯರು ನೀಡಿದ ಸಲಹೇಗಳನ್ನು ತಪ್ಪದೇ ಪಾಲಿಸಬೇಕು. ನಿತ್ಯ ವಾಯುವಿಹಾರ, ದೇವರ ಪ್ರಾರ್ಥನೆ, ಧ್ಯಾನ, ಪ್ರಾಣಾಯಾಮ, ಸಂಗೀತ ಮುಂತಾದವುಗಳ ಕಡೆಗೆ ಒಲವು ತೋರಬೇಕು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಪ್ರೊ. ಕೆ.ಎಚ್. ಬೇಲೂರ ವಹಿಸಿ ಮಾತನಾಡಿ, ನಮ್ಮ ಸಂಘದಲ್ಲಿ ಪ್ರತಿ ತಿಂಗಳು ಆಯಾ ತಿಂಗಳಲ್ಲಿ ಜನಿಸಿದ ಸದಸ್ಯರ ಹುಟ್ಟುಹಬ್ಬವನ್ನು ಆಚರಿಸುವುದರೊಂದಿಗೆ ಖ್ಯಾತ ವೈದ್ಯರನ್ನು, ಸಾಹಿತಿಗಳನ್ನು ಶ್ರೇಷ್ಠ ಕಲಾವಿದರನ್ನು, ಧರ್ಮದರ್ಶಿಗಳನ್ನು, ಕರೆಯಿಸಿ ವೈದ್ಯಕೀಯ ಸಲಹೆ, ಭಾಷಣ, ಮನರಂಜನೆಯ ಕಾರ್ಯಕ್ರಮ ಹಾಗೂ ಧಾರ್ಮಿಕ ಉಪದೇಶಗಳ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರಾದ ಕೆ.ಎಸ್.ಗುಗ್ಗರಿ, ಎಂ.ಕೆ. ಬಡಿಗೇರ, ವ್ಹಿ.ಬಿ. ಹಾರೋಗೇರಿ, ವ್ಹಿ.ಎ. ನರಗುಂದ, ಎಸ್.ಎಸ್. ಲಮಾಣಿ, ಎಫ್.ಬಿ. ಉಮಚಗಿ, ಆರ್.ಜಿ. ಮಹೇಂದ್ರಕರ, ವ್ಹಿ.ಎ. ನರಗುಂದ, ಆರ್.ಟಿ. ನಾರಾಯಣಪೂರ, ಎನ್.ವ್ಹಿ. ಸಜ್ಜನರ, ಎಂ.ಎನ್. ಇಮ್ಮಡಿಗೌಡರ, ಚೋರಗಸ್ತಿ, ಬಿ.ಜೆ. ಪಾಟೀಲ, ಎಸ್.ಎಫ್. ಕಂಬಿಮಠ, ಎಂ.ಎಫ್. ಡೋಣಿ, ಜಿ.ವ್ಹಿ. ಪಾಟಿಲ, ಎನ್.ಪಿ. ಕಪಟಕರ, ಆರ್.ವ್ಹಿ. ಕುಪ್ಪಸ್ತ, ಪಿ.ಸಿ. ಪುರಾಣಿಕಮಠ, ಜಿ.ಕೆ. ನಾಗರಳ್ಳಿ, ಬಿಬಿ. ಹಾಲವರ, ಪುಷ್ಪಾ ಹಿರೇಮಠ, ಪ್ರಮಿಳಾ ನಂದರಗಿ, ಬಿ.ಸ್. ದಂಡಿನ, ವ್ಹಿ.ಎನ್. ವನಕಿ, ವ್ಹಿ.ಜಿ. ಕೊಳ್ಳಿ ಮುಂತಾದವರಿದ್ದರು.

ಬಿ.ಡಿ. ಕಿಲಬನವರ ಅಧ್ಯಕ್ಷರಿಗೆ ಕಾಲರ್ ಧಾರಣೆ ಮಾಡಿದರು. ರತ್ನಾ ಗಾರ್ಘಿ ಪ್ರಾರ್ಥಿಸಿದರು. ಶ್ರೀ ಬಿ.ಎಸ್. ಸಿದ್ನೇಕೊಪ್ಪ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಪ್ರೊ. ಬಿ.ಎಚ್. ಗರಡಿಮನಿ ಮುಖ್ಯ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ. ಎಂ.ಸಿ. ವಗ್ಗಿ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ನೌಕರರ ಸಹಕಾರ ಸಂಘದ ಅಧ್ಯಕ್ಷರಾದ ಬಿ.ಎಂ. ಬಿಳೆಯಲಿ ವಂದಿಸಿದರು.

ಮುಖ್ಯ ಅತಿಥಿಗಳು, ನಿವೃತ್ತ ನೌಕರರ ಸಂಘದ ಆಜೀವ ಸದಸ್ಯರೂ ಆದ ಡಾ. ಸಿ.ಬಿ.ಹಿರೇಗೌಡರ ಅವರಿಗೆ ಸಂಘದ ಪರವಾಗಿ ಹುಟ್ಟುಹಬ್ಬದ ನಿಮಿತ್ತ ಸನ್ಮಾನಿ ಶುಭ ಕೋರಿದರು. ಜನೇವರಿ ತಿಂಗಳಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ಎಚ್.ಬಿ. ಸಿರಗುಂಪಿ, ಜಗದೀಶ್ಚಂದ್ರ ನಾಡಗೌಡರ, ಆರ್.ಡಿ. ಕಪ್ಪಲಿ, ಬಿ.ಡಿ. ಕಿಲಬನವರ, ವಾಯ್.ಕೆ. ಪಿಡಗಣ್ಣವರ, ಸಿ.ಬಿ. ಹಿರೇಗೌಡರ, ಎಫ್.ಬಿ. ಉಮಚಗಿ, ರತ್ನಾ ಗಾರ್ಘಿ ಸ್ಭೆರಿದಂತೆ ಒಟ್ಟು 48 ಜನ ಸದಸ್ಯರಿಗೆ ಹುಟ್ಟು ಹಬ್ಬದ ಪ್ರಯುಕ್ತ ಸನ್ಮಾನಿ ನೆನಪಿನ ಕಾಣಿಕೆಗಳನ್ನು ನೀಡಿ ಶುಭಕೋರಲಾಯಿತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!