ಮಂಡ್ಯ:- ಧಾರಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ಕೆಆರ್‌ಎಸ್ ಡ್ಯಾಂ ಭರ್ತಿಗೆ 7 ಅಡಿಗಳಷ್ಟೇ ಬಾಕಿ ಉಳಿದಿದೆ. ಜಲಾಶಯಕ್ಕೆ 23,473 ಕ್ಯೂಸೆಕ್ ಒಳಹರಿವು ಇದ್ದು, ನಿನ್ನೆಗಿಂತ ಇಂದು ಒಳಹರಿವಿನ ಪ್ರಮಾಣದಲ್ಲಿ ಕಡಿಮೆಯಾಗಿದೆ. ಸದ್ಯ ಡ್ಯಾಂನಲ್ಲಿ 39.847 ಟಿಎಂಸಿ ನೀರು ಸಂಗ್ರಹವಾಗಿದ್ದು, 1,252 ಕ್ಯೂಸೆಕ್ ಒಳಹರಿವು ಇದೆ.
124.80 ಅಡಿಗಳ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ 117.80 ಅಡಿ ನೀರಿದ್ದು, ಸಂಪೂರ್ಣ ಭರ್ತಿಗೆ 7 ಅಡಿಗಳಷ್ಟೇ ಬಾಕಿಯಿದೆ. ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಡ್ಯಾಂ ಭರ್ತಿಯಾಗುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.



