HomeGadag Newsಕಾಯಕ ನಿಷ್ಠೆ ಸಾರಿದ ಹೇಮರಡ್ಡಿ ಮಲ್ಲಮ್ಮ

ಕಾಯಕ ನಿಷ್ಠೆ ಸಾರಿದ ಹೇಮರಡ್ಡಿ ಮಲ್ಲಮ್ಮ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: 12ನೇ ಶತಮಾನದಲ್ಲಿ ಶಿವಶರಣೆಯರು ರಚಿಸಿದ ಸಾಹಿತ್ಯದ ಮೂಲಕ ಹೋರಾಟ ಮಾಡಿದರೆ, ಹೇಮರಡ್ಡಿ ಮಲ್ಲಮ್ಮ ಕಾಯಕದ ಮೂಲಕ ಸಾಮಾಜಿಕ ಬದಲಾವಣೆಯ ಕ್ರಾಂತಿ ಮಾಡಿದ ಮಹಾಸಾದ್ವಿಯಾಗಿದ್ದಾರೆ ಎಂದು ಹರ್ಲಾಪುರದ ಅಭಿನವ ಕೊಟ್ಟೂರೇಶ್ವರ ಮಹಾಸ್ವಾಮಿಗಳು ಹೇಳಿದರು.

ಡಂಬಳ ಗ್ರಾಮದ ಹೇಮರಡ್ಡಿ ದೇವಸ್ಥಾನದ ಆವರಣದಲ್ಲಿ ಗ್ರಾಮದ ಕಪ್ಪತ್ತಮಲೇಶ್ವರ ಟ್ರಸ್ಟ್ ಕಮಿಟಿ, ಹೇಮರಡ್ಡಿ ಮಲ್ಲಮ್ಮ ಸೇವಾ ಸಮಿತಿ ಹಮ್ಮಿಕೊಂಡಿದ್ದ ಆರಾಧ್ಯ ದೇವತೆ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ತಾಯಿಯ 603ನೇ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹೇಮರಡ್ಡಿ ಮಲ್ಲಮ್ಮ ಅವರು ತಮ್ಮ ಜೀವನದಲ್ಲಿ ಸಾಕಷ್ಟು ಕಷ್ಟ, ಸಮಸ್ಯೆ ಎದುರಿಸಿ ಮನುಕುಲದ ಶ್ರೇಯಸ್ಸಿಗಾಗಿ ಶ್ರಮಿಸಿದ್ದಾರೆ. ಮಹಿಳೆಯರಿಗೆ ಸಮಾನತೆ ಬಯಸಿದ ಮಲ್ಲಮ್ಮ ಶಿವಶರಣೆ ಕೊಡುಗೆ ಅನನ್ಯ. ದೈವಭಕ್ತಿ, ಕಾಯಕನಿಷ್ಠೆ, ಗುರುಲಿಂಗ ಜಂಗಮರಲ್ಲಿ ಅನನ್ಯ ಭಕ್ತಿ ಹೊಂದಿ, ಸುಖ-ದುಃಖ, ಅಂಬಲಿ-ಅಮೃತ, ಸ್ತುತಿ-ನಿಂದೆಯನ್ನು ಸಮಾನವಾಗಿ ಸ್ವೀಕರಿಸಿದ ಮಲ್ಲಮ್ಮನ ಆದರ್ಶಮಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೇ.ಮೂ. ರಾಜಶೇಖರಯ್ಯ ಹಿರೇಮಠ, ಜಿ.ವಿ. ಹಿರೇಮಠ, ವಿ.ಟಿ. ಮೇಟಿ, ವಿ.ಎಸ್. ಯರಾಶಿ, ಮುತ್ತಣ್ಣ ಕೊಂತಿಕಲ್ಲ, ಮಹೇಶ ಗಡಗಿ, ಅಧ್ಯಕ್ಷ ಮಹೇಶ ರಾಯರಡ್ಡಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕರಡ್ಡಿ, ಕಾರ್ಯದರ್ಶಿ ಬಸುರಾಜ ಶಿರೋಳ, ಖಜಾಂಚಿ ವೆಂಕಟೇಶ ಯರಾಶಿ, ಮಲ್ಲಿಕಾರ್ಜುನ ಪ್ಯಾಟಿ, ಮಲ್ಲಣ್ಣ ಯರಾಶಿ, ಬಸವರಡ್ಡಿ ಬಂಡಿಹಾಳ, ಮಲ್ಲಣ್ಣ ಗಡಗಿ, ನಿಂಗರಡ್ಡಿ ಕೆಂಚರಡ್ಡಿ, ಈರಣ್ಣ ರಾಜೂರ, ಬಾಳಪ್ಪ ಗಡಗಿ, ಶಂಕ್ರಪ್ಪ ಗಡಗಿ, ಶೇಖಪ್ಪ ಚಿಕ್ಕರಡ್ಡಿ, ವೆಂಕಣ್ಣ ಗಡಗಿ, ಸಿದ್ದಲಿಂಗೇಶ್ವರ ಗಡಗಿ, ಸೋಮರಡ್ಡಿ ಚಿಕ್ಕರಡ್ಡಿ, ಹನುಮಪ್ಪ ಬಾವಿ, ಮಹೇಶ ಸನಪ್ಯಾಟಿ ರಮೇಶ್ ಕೊಂತಿಕೆಲ, ಗೋವಿಂದ ಗಡಗಿ, ಶ್ರೀಧರ ಪ್ಯಾಟಿ, ಬಸವರಾಜ ಕೋತಬಾಳ, ವಿಕಾಶ ಗಡಗಿ, ಗಿರೀಶ ಕೆಂಚರಡ್ಡಿ, ಈಶ್ವರ ಬಾವಿ, ಕಿರಣ ಪ್ಯಾಟಿ ಸೇರಿದಂತೆ ಗ್ರಾಮದ ಹಿರಿಯರು, ಮಹಿಳೆಯರು ಇದ್ದರು.

ಪ್ರವಚನ ನೀಡಿದ ಜಮಖಂಡಿ ಓಂಕಾರ ಆಶ್ರಮದ ಮಾತೋಶ್ರೀ ಶ್ರೀದೇವಿತಾಯಿ ಮಾತನಾಡಿ, ಶ್ರೀಶೈಲ ಮಲ್ಲಿಕಾರ್ಜುನನ ಮೇಲೆ ಅಪಾರ ನಂಬಿಕೆ ಹೊಂದಿ, ಭಾವನಾತ್ಮಕ ಜೀವಿಯಾಗಿ, ಮಾನಸಿಕ ಶಿವಲಿಂಗ ದೀಕ್ಷೆ ತೊಟ್ಟು ಸಮಾಜ, ನಾಡು-ನುಡಿ ಹಾಗೂ ಮನುಕುಲದ ಉದ್ಧಾರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸ್ತ್ರೀ ಕುಲದ ಗೌರವ ಹೆಚ್ಚಿಸಿ ಅರ್ಥಪೂರ್ಣ ಬದುಕು ಸಾಗಿಸಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ವಿಚಾರಧಾರೆಗಳು ಸದಾ ಕಾಲ ಇರುವಂತಹವು ಎಂದು ನುಡಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!