HomeGadag Newsಲಕ್ಷ್ಮೇಶ್ವರದ ಹಲವೆಡೆ ಧ್ವಜಾರೋಹಣ

ಲಕ್ಷ್ಮೇಶ್ವರದ ಹಲವೆಡೆ ಧ್ವಜಾರೋಹಣ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : 78ನೇ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ಗುರುವಾರ ಪಟ್ಟಣ ಸೇರಿ ತಾಲೂಕಿನಾದ್ಯಂತ ಸಂಭ್ರಮ, ವಿಶೇಷತೆಯಿಂದ ಆಚರಿಸಲಾಯಿತು.

ಪಟ್ಟಣದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು. ತಾ.ಪಂ ಕಚೇರಿಯಲ್ಲಿ ಆಡಳಿತಾಧಿಕಾರಿ ಎಂ.ವ್ಹಿ. ಚಳಗೇರಿ ಧ್ವಜಾರೋಹಣ ನೆರವೇರಿಸಿದರು. ಇಓ ಕೃಷ್ಣಪ್ಪ ಧರ್ಮರ, ಸಿಬ್ಬಂದಿಗಳು ಇದ್ದರು.

ಭೂ-ಮಾಪನ ಕಚೇರಿಯಲ್ಲಿ ಭೂ ಮಾಪನಾಧಿಕಾರಿ ವಿದ್ಯಾ ತಳೇಕರ ಧ್ವಜಾರೋಹಣ ನೆರವೇರಿಸಿದರು. ಆರ್.ಬಿ. ಕುಂದಗೋಳ, ಮಾಜಿ ಸೈನಿಕರಾದ ವಿ.ಎಸ್. ಹಿರೇಮಠ, ಸಿ.ಎಸ್. ಹಿರೇಮಠ ಮಾರುತಿ ಬಟ್ಟೂರ, ಹುಡೇದ ಸೇರಿ ಹಲವರಿದ್ದರು. ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಈರಪ್ಪ ರಿತ್ತಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ.ಶ್ರೀಕಾಂತ ಕಾಟೇವಾಲೆ, ಉಮಾವಿದ್ಯಾಲಯದಲ್ಲಿ ಮುಖ್ಯೋಪಾಧ್ಯಾಯ ಎಸ್.ಎಚ್. ಪೂಜಾರ, ಎಂ.ಎ. ಕಾಲೇಜ್‌ನಲ್ಲಿ ಪ್ರಾಚಾರ್ಯ ಬಿ.ಎಸ್. ಉಗ್ರದ, ನ್ಯಾಯಾಲಯದಲ್ಲಿ ಹಿರಿಯ ವಿಭಾಗದ ನ್ಯಾಯಾಧೀಶರಾದ ಬಿ.ವೈ. ಕರಿಗುದರಿ, ಕೋರ್ಟ್ ಸರ್ಕಲ್‌ನಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಬಾಳೇಶ್ವರಮಠ, ಪಟ್ಟಣದ ಗಾಂಧಿ ಮಂದಿರದಲ್ಲಿ ಭರತರಾಜ ಬರಿಗಾಲಿ ದ್ವಜಾರೋಹಣ ನೆರವೇರಿಸಿದರು.

ಪಟ್ಟಣದ ಇನ್ನಿತರ ಸರ್ಕಾರಿ ಇಲಾಖೆಗಳಲ್ಲಿ, ಪಟ್ಟಣ ಸೇರಿ ತಾಲೂಕಿನ ಎಲ್ಲ ಶಾಲಾ-ಕಾಲೇಜುಗಳಲ್ಲಿ, ತಾಲೂಕಿನ ವಿವಿಧ ಗ್ರಾ.ಪಂಗಳಲ್ಲಿ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!