ಹುಬ್ಬಳ್ಳಿ: ಬಡ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಂಚಲು ತಂದಿದ್ದ ಲ್ಯಾಪ್ ಟ್ಯಾಪ್ʼಗಳನ್ನು ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯ ಚೈತನ್ಯ ನಗರದ ಕಾರ್ಮಿಕ ಭವನ ಕಚೇರಿಯಲ್ಲಿ ನಡೆದಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದದ್ದು,
ಕಟ್ಟಡದ ಕೊಠಡಿಯಲ್ಲಿ ಹಾವೇರಿ ಜಿಲ್ಲೆಯ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಂಚಿಕೆ ಮಾಡಲು ಇಟ್ಟಿದ್ದ 101 ಲ್ಯಾಪ್‌ಟಾಪ್‌ಗಳು ಕಳ್ಳತನ ಮಾಡಲಾಗಿದೆ. ಮೇ 22ರಿಂದ ಆಗಸ್ಟ್ 30ರೊಳಗೆ ಕೊಠಡಿಯ ಕಿಟಕಿ ತೆರೆದು 101 ಲ್ಯಾಪ್‌ಟಾಪ್ ಕಳವು ಆರೋಪ ಕೇಳಿಬಂದಿದೆ.
ಸಿಸಿ ಕ್ಯಾಮರಾ ವೈರ್ ಕತ್ತರಿಸಿ, ಹಾರ್ಡ್ ಡಿಸ್ಕ್ ಹಾಗೂ ಡಿವಿಆರ್ ಸಹ ಕಳ್ಳತನ ಮಾಡಲಾಗಿದೆ. ಸಹಾಯಕ ಕಾರ್ಮಿಕ ಆಯುಕ್ತೆ ಶ್ವೇತಾ ಅವರಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಮಿಕ ಸಚಿವ ಸಂತೋಷ ಲಾಡ್ ತವರಿನಲ್ಲೆ ಈ ಕೃತ್ಯ ನಡೆದಿದೆ.



