ಬೆಂಗಳೂರು: ನವೆಂಬರ್-ಡಿಸೆಂಬರ್ ಕ್ರಾಂತಿ ಬಗ್ಗೆ ನನಗೆ ಗೊತ್ತಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನವೆಂಬರ್-ಡಿಸೆಂಬರ್ ಕ್ರಾಂತಿ ಬಗ್ಗೆ ನನಗೆ ಗೊತ್ತಿಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೊ ಗೊತ್ತಿಲ್ಲ.
ಏನೇ ಇದ್ದರೂ ಹೈಕಮಾಂಡ್ ನಿರ್ಧಾರವೇ ಅಂತಿಮ. ಸಂಪುಟ ಪುನಾರಚನೆ, ಎರಡೂವರೆ ವರ್ಷದ ನಂತರ ಅಧಿಕಾರ ಬದಲಾವಣೆಯೋ ಬಗ್ಗೆ ಹೈಕಮಾಂಡ್‌ನವ್ರು ತೀರ್ಮಾನ ಮಾಡ್ತಾರೆ. ನಾವು ನಿತ್ಯ ಇಲ್ಲಿ ಮಾತನಾಡುವುದರಿಂದ ಗೊಂದಲ ಆಗುತ್ತೆ. ಆಡಳಿತದ ಕಡೆ ಗಮನ ಕೊಡುವ ಕೆಲಸ ಆಗಬೇಕಾಗಿದೆ ಎಂದು ಹೇಳಿದ್ರು.
ಇನ್ನೂ ಸಂಪುಟ ಪುನಾರ್‌ರಚನೆ ಬಗ್ಗೆ ಮಾತನಾಡಿ ಸಂಪುಟ ಪುನಾರಚನೆ ಹೈಕಮಾಂಡ್‌ನವರಾಗಲಿ ಇಲ್ಲಿಯವರಾಗಲೀ ಏನು ಹೇಳಿಲ್ಲ. ಹೈಕಮಾಂಡ್‌ನವರು ಹೇಳಿದ್ರೆ ಏನಾದ್ರು ಮಾತನಾಡಬಹುದು ಎಂದರು.



