ಬೆಂಗಳೂರು: ಕೋಗಿಲು ಅಕ್ರಮ ಗುಡಿಸಲು- ಮನೆ ತೆರವು ಪ್ರಕರಣದ ಹೊರದೇಶದವರಿಗೆ ಮನೆ ನೀಡಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ಇದರ ವಿರುದ್ಧ ಮಾನ್ಯ ರಾಜ್ಯಪಾಲರಿಗೆ ಮನವಿ ನೀಡುತ್ತೇವೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಅವರು ತಿಳಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಬಿಎಂಪಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಗುಡಿಸಲು ಕಟ್ಟಿಕೊಂಡಿದ್ದಾರೆ. ಇವತ್ತು ನಿಜವಾದ ಫಲಾನುಭವಿ 10.5 ಲಕ್ಷ ರೂಪಾಯ ದುಡ್ಡು ಕಟ್ಟಬೇಕಾಗುತ್ತದೆ. ಬ್ಯಾಂಕ್ ಸಾಲ; ಇಲ್ಲವೇ ಸ್ವಂತ ಪ್ರಯತ್ನದಿಂದ ಇದನ್ನು ಕಟ್ಟಬೇಕು.
ಇವನಿಗೆ ಬಿಬಿಎಂಪಿಯಿಂದ 5 ಲಕ್ಷ ರೂಪಾಯಿ, ಅಲ್ಪಸಂಖ್ಯಾತ ಇಲಾಖೆಯಿಂದ ಎರಡೂವರೆ ಲಕ್ಷ ರೂಪಾಯಿ, ಇವೆಲ್ಲವನ್ನು ಕೊಟ್ಟು ಕೇವಲ ಎರಡೂವರೆÀ ಲಕ್ಷದಲ್ಲಿ ಮನೆ ಕೊಡ್ತೀವಿ ಅಂದರೆ, ದ್ರೆ ಈಗ ಏನು ಒಂದು ಲಕ್ಷ ಮನೆಗಳನ್ನ ಕಟ್ಟುತ್ತಿದ್ದಾರೆ. ಬೆಂಗಳೂರು ಸುತ್ತು ಮುತ್ತಲು 45 ಸಾವಿರÀ ಮನೆಗಳು ಆಗುತ್ತಿವೆ. ಅವರು ಯಾರು ಕೂಡ ದುಡ್ಡು ಕಟ್ಟಲ್ಲ. ಅವರೆಲ್ಲ 2.5 ಲಕ್ಷಕ್ಕೇ ಸ್ಟಿಕ್ ಆನ್ ಆಗುತ್ತಾರೆ. ಇದು ಸರ್ಕಾರಕ್ಕೆ ದೊಡ್ಡ ಮುಜುಗರ ಆಗಲಿದೆ. ದೊಡ್ಡ ಹೊಡೆತ ಕೊಡಲಿದೆ. ಇದಕ್ಕೂ ಮೀರಿ ಏನಾದ್ರೂ ಮನೆಗಳನ್ನು ಕೊಟ್ಟರೆ ನ್ಯಾಯಾಲಯಕ್ಕೆ ಹೋಗುತ್ತೇವೆ. ಈಗಾಗಲೇ ದಾಖಲೆಗಳನ್ನು ಕೂಡ ಸಂಗ್ರಹ ಮಾಡುತ್ತಿದ್ದಾರೆ ಎಂದರು.
ನ್ಯಾಯಾಲಯಕ್ಕೆ ಹೋಗಿ ಪ್ರಶ್ನೆ ಮಾಡುವುದಲ್ಲದೇ ಮಾನ್ಯ ರಾಜ್ಯಪಾಲರಿಗೆ ಇದರ ಬಗ್ಗೆ ಮನವಿ ಕೊಡುತ್ತೇವೆ ಎಂದರು. ನಾಳೇನೇ ಮನೆಗಳ ಹಂಚಿಕೆ ಮಾಡ್ಲಿಕ್ಕೆ ಪ್ಲಾನ್ ಮಾಡ್ಕೊಂಡಿದ್ದೀರಾ? ಅದು ಸಾಧ್ಯ ಇಲ್ಲ. ಸುಮ್ನೆ ಅವರು ಹೇಳಿರಬಹುದು ಅಷ್ಟೆ. ಇವತ್ತು ಅವರು ಇಲ್ಲಿ ವಾಸ ಆಗಿರೋದಕ್ಕೆ ಐದು ವರ್ಷ ಇದ್ದಾರೆ ಅನ್ನೋದಕ್ಕೆ ದಾಖಲೆಗಳನ್ನು ಕೊಡಬೇಕು. 18 ದಾಖಲೆಗಳನ್ನು ಕೇಳಿದ್ದಾರೆ ಅವನ್ನು ಕೊಡಬೇಕು. ಯಾವ ವಿಶೇಷ ಪ್ರಕರಣ? ಹಾಗೆಲ್ಲ ಮಾಡಲು ಆಗೋದಿಲ್ಲ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಕಾಂಗ್ರೆಸ್ ಹೈಕಮಾಂಡ್ ಹೇಳಿದೆ. ಕೇರಳದ ಮುಖ್ಯಮಂತ್ರಿ ಹೇಳಿದರು. ಪಾಕಿಸ್ತಾನದವರು ಹೇಳಿದರು. ಅಂದ ತಕ್ಷಣ ನೀವು ತರ ಕೊಡುತ್ತೀರಿ. ಪಾಕಿಸ್ತಾನ, ಬಾಂಗ್ಲಾÀ್ಲದಿಂದ ಬಂದಿರುವ ಹಿಂದೂ ಕ್ರಿಶ್ಚಿಯನ್ ಸಿಕ್ಖರು ಸೇರಿ ಅನೇಕ ಅಲ್ಪಸಂಖ್ಯಾತರು ಬೀದಿ ಬೀದಿಗಳಲ್ಲಿ ಅಲೆಯುತ್ತಿದ್ದಾರೆ. ಅವರಿಗೆ ಕೂಡ ಯಾವ ಸರ್ಕಾರಗಳು ಇಲ್ಲಿವರೆಗೂ ಮನೆ ಕೊಟ್ಟಿಲ್ಲ. ಅವರಿಗೆ ಅವರಿಗೆ ಪೌರತ್ವ ಕೊಡಬೇಕು ಅಂತಂದ್ರೆ ಇದೇ ಕಾಂಗ್ರೆಸ್ ನವರು, ಇದೇ ಕಮ್ಯುನಿಸ್ಟ್ ಪಕ್ಷದವರು ದೊಡ್ಡ ಹೋರಾಟ ಮಾಡುತ್ತಾರೆ. ಆದರೆ ಇವತ್ತು ಬೇರೆ ದೇಶದಿಂದ ಬಂದಿರುವವರಿಗೆ ತುರ್ತು ಏನಿದೆ ಎಂದು ಕೇಳಿದರು.



