HomeLife Styleಟೀ, ಕಾಫಿ ಕುಡಿಯೋಕೆ ಕಾಗದದ ಲೋಟ ಬಳಸುತ್ತಿದ್ದರೆ ಇವತ್ತೆ ನಿಲ್ಲಿಸಿ: ಪ್ರಾಣಕ್ಕೆ ಕುತ್ತು ಬರಬಹುದು ಜೋಕೆ!

ಟೀ, ಕಾಫಿ ಕುಡಿಯೋಕೆ ಕಾಗದದ ಲೋಟ ಬಳಸುತ್ತಿದ್ದರೆ ಇವತ್ತೆ ನಿಲ್ಲಿಸಿ: ಪ್ರಾಣಕ್ಕೆ ಕುತ್ತು ಬರಬಹುದು ಜೋಕೆ!

For Dai;y Updates Join Our whatsapp Group

Spread the love

ಮದುವೆಯ ಪಾರ್ಟಿಯಾಗಿರಲಿ ಅಥವಾ ರಸ್ತೆಬದಿಯ ಚಹ ಅಂಗಡಿಯಾಗಿರಲಿ, ಈ ಎಲ್ಲಾ ಸ್ಥಳಗಳಲ್ಲಿ ಕಾಗದದ ಲೋಟಗಳಲ್ಲಿ ನಾವು, ನೀವೆಲ್ಲರೂ ನೀರು, ಚಹಾ ಅಥವಾ ಕಾಫಿಯನ್ನು ಸೇವಿಸಿಯೇ ಸೇವನೆ ಮಾಡಿರುತ್ತೇವೆ.

ಹಾಗೇ ನೋಡಿದ್ರೆ, ಡಿಸ್ಪೋಸೇಬಲ್ ಕಪ್ ಬಳಕೆ ತುಂಬಾ ಸುಲಭ, ಆದ್ದರಿಂದ ಹೆಚ್ಚಿನ ಸಂಖ್ಯೆಯ ಜನರು ಇದನ್ನು ಬಳಸುತ್ತಾರೆ. ಇದು ಮಾರುಕಟ್ಟೆಗಳಲ್ಲಿ ಸುಲಭವಾಗಿ ಲಭ್ಯವಿದೆ. ಆದರೆ ನಿಮ್ಮ ಜೀವನವನ್ನು ಸುಲಭಗೊಳಿಸುವ ಈ ಕಪ್ ಗಳು ಅಥವಾ ಗ್ಲಾಸ್ ಗಳು ನಿಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ? ಇದು ನಿಮ್ಮ ಜೀವವನ್ನೇ ತೆಗೆಯುವ ಅಂಶ ಅಡಗಿರುವುದು ನಿಮಗೆ ಗೊತ್ತೇ!? ಹಾಗಿದ್ರೆ ಈ ಸುದ್ದಿ ಕಂಪ್ಲೀಟಾಗಿ ಓದಿ.

ಎಸ್, ಚಹಾ, ಕಾಫಿ, ಬೂಸ್ಟ್​ ಕುಡಿಯುತ್ತಿರೋ ಮಂದಿಗೆ ಆರೋಗ್ಯ ಇಲಾಖೆ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಸಿಟಿಯಲ್ಲಿರುವ ಬಹುತೇಕ ಮಂದಿ ಹೋಟೆಲ್​, ಟೀ ಸ್ಟಾಲ್, ಆಫೀಸ್​ ಸೆರಿದಂತೆ ಹಲವು ಕಡೆ ಪೇಪರ್​ ಕಪ್​​ನಲ್ಲಿ ಟೀ, ಕಾಫಿ ಕುಡಿಯುತ್ತಾರೆ. ನೀವು ಏನಾದರೂ ಯದ್ವಾ-ತದ್ವಾ ಕಾಫಿ, ಟೀ ಕುಡಿಯುತ್ತಿದ್ದರೆ ಇಂದೇ ನಿಲ್ಲಿಸಿಬಿಡಿ. ಯಾಕೆಂದ್ರೆ ಆ ಪೇಪರ್ ಗ್ಲಾಸ್ ನಿಮ್ಮ ಪ್ರಾಣ ತೆಗೆದರೂ ಅಚ್ಚರಿ ಇಲ್ಲ.

ಪ್ರಯೋಗಾಲದಲ್ಲಿ ಆಹಾರ ಇಲಾಖೆ ನಡೆಸಿದ ಟೆಸ್ಟ್ ಒಂದರಲ್ಲಿ ಇದು ದೃಢವಾಗಿದೆ. ಪರೀಕ್ಷೆ ವೇಳೆ ಕ್ಯಾನ್ಸರ್ ತರುವ ಅಂಶ ಪತ್ತೆಯಾಗಿದೆ. ಸಿಕ್ಕ ಸಿಕ್ಕ ಕಡೆ ಪೇಪರ್‌ ಲೋಟದಲ್ಲಿ ಬಿಸಿ ಟೀ, ಕಾಫಿ ಕುಡಿಯುತ್ತಿದ್ದರೆ ಇದೇ ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದು. ಪ್ಲೇಪರ್‌ ಲೋಟದಲ್ಲಿ ಆರೋಗ್ಯ ಹಾನಿಕಾರಕವಾಗಿರುವ ಅಂಶ ಇರುವುದು ಆಹಾರ ಸುರಕ್ಷತಾ ಇಲಾಖೆ ನಡೆಸಿದ ಪರೀಕ್ಷೆಯಿಂದ ಬಯಲಾಗಿದೆ. ಪೇಪರ್ ಲೋಟದಲ್ಲಿ ಕ್ಯಾನ್ಸರ್‌ ಕಾರಕ ಅಂಶ ಇದೆ ಎಂಬುದು ತಿಳಿದುಬಂದಿದೆ.

ಆಹಾರ ಇಲಾಖೆ ಪೇಪರ್ ಲೋಟಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿದ್ದು, ಅವುಗಳ ಬಳಕೆಯಿಂದ ಕ್ಯಾನ್ಸರ್ ಬರುವ ಅಂಶ ಪತ್ತೆಯಾಗಿದೆ. ಪೇಪರ್ ಲೋಟದಲ್ಲಿ ಶೇಕಡಾ 20 ರಷ್ಟು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ, ಅವುಗಳಲ್ಲಿ ಬಿಸಿಯಾದ ಟೀ, ಕಾಫಿ ಹಾಕಿದ್ರೆ ಪ್ಲಾಸ್ಟಿಕ್‌ ಕರಗುತ್ತದೆ. ಕರಗಿದ ಪ್ಲಾಸ್ಟಿಕ್ ಅಂಶ ಮನುಷ್ಯನ ದೇಹ ಸೇರಿದರೆ ಕ್ಯಾನ್ಸರ್ ಬರುವ ಸಾಧ್ಯತೆ ಅತೀ ಹೆಚ್ಚು. ಹೀಗಾಗಿ ಪ್ಲಾಸ್ಟಿಕ್ ಅಂಶ ಇಲ್ಲದ ಕಪ್​​ಗಳ ಬಳಕೆಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ ಎಂದು ಆಹಾರ ಮತ್ತು ಸುರಕ್ಷತಾ ಇಲಾಖೆಯ ಶ್ರೀನಿವಾಸ್ ತಿಳಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!