ಬೆಂಗಳೂರು: ನಮ್ಮ ದೃಷ್ಟಿಯಲ್ಲಿ ಸಿದ್ದರಾಮಯ್ಯ ಸಮರ್ಥ ಮುಖ್ಯಮಂತ್ರಿ ಹಾಗೂ ಸಮರ್ಥ ಸರ್ಕಾರ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಸಿದ್ದರಾಮಯ್ಯರನ್ನು ಅಸಮರ್ಥ ಮುಖ್ಯಮಂತ್ರಿ ಮತ್ತು ಅಸಮರ್ಥ ಸರ್ಕಾರ ಎಂದು ಕರೆದಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದು ಅವರ ಅನಿಸಿಕೆ ಮತ್ತು ಅಭಿಪ್ರಾಯ, ನಮ್ಮ ದೃಷ್ಟಿಯಲ್ಲಿ ಸಿದ್ದರಾಮಯ್ಯ ಸಮರ್ಥ ಮುಖ್ಯಮಂತ್ರಿ ಮತ್ತು ನಮ್ಮದು ಸಮರ್ಥ ಸರ್ಕಾರ ಎಂದರು.
ಇನ್ನೂ ಸಚಿವ ಜಮೀರ್ ಅಹ್ಮದ್ ಖಾನ್ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರನ್ನು ಕಾಲಿಯ ಅಂತ ಕರೆದಿದ್ದು ಅವರ ವೈಯಕ್ತಿಕ ವಿಚಾರ, ನಾವಿಬ್ಬರು ಆಪ್ತ ಸ್ನೇಹಿತರು ಮತ್ತು ನಮ್ಮ ನಡುಬೆ ಆ ಮಟ್ಟಿನ ಸಲುಗೆಯಿದೆ, ಬೈದಾಡಿಕೊಳ್ಳುತ್ತೇವೆ ಅಂತ ಜಮೀರ್ ಅವರೇ ಸ್ಪಷ್ಟನೆ ನೀಡಿದ್ದಾರೆ, ಇವೆಲ್ಲ ಸಣ್ಣಪುಟ್ಟ ವಿಚಾರಗಳು ಎಂದು ಹೇಳಿದರು.



