ವಿಜಯಸಾಕ್ಷಿ ಸುದ್ದಿ, ಗದಗ: ಹೊಸಳ್ಳಿ ಬೂದೀಶ್ವರ ವಿದ್ಯಾಪೀಠದಲ್ಲಿ ಇತ್ತೀಚೆಗೆ ನಡೆದ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಚಿಕ್ಕಹಂದಿಗೋಳದ ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಾದ ಈರಪ್ಪ ಇಂಗಳಹಳ್ಳಿ ಆಶುಭಾಷಣದಲ್ಲಿ ಪ್ರಥಮ, ಸೃಷ್ಟಿ ವಿರಕ್ತಮಠ ಧಾರ್ಮಿಕ ಪಠಣದಲ್ಲಿ ಪ್ರಥಮ, ಧೃವ ಕಮ್ಮಾರ ಕ್ಲೇಮಾಡೆಲಿಂಗ್‌ನಲ್ಲಿ ಪ್ರಥಮ ಹಾಗೂ ಲಲಿತಾ ಗೌಡರ ಅಭಿನಯ ಗೀತೆಯಲ್ಲಿ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಸಾಧಕ ವಿದ್ಯಾರ್ಥಿಗಳಿಗೆ ಶಾಲೆಯ ಪ್ರಧಾನಗುರುಗಳು, ಶಿಕ್ಷಕರು, ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಗ್ರಾಮದ ಗುರು-ಹಿರಿಯರು ಅಭಿನಂದಿಸಿದ್ದಾರೆ.



