HomeGadag Newsಎಳೆನೀರು ವ್ಯಾಪಾರಸ್ಥರ ಸಂಘದ ಉದ್ಘಾಟನೆ

ಎಳೆನೀರು ವ್ಯಾಪಾರಸ್ಥರ ಸಂಘದ ಉದ್ಘಾಟನೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದಲ್ಲಿ ತಾಲೂಕಾ ಎಳೆನೀರು ವ್ಯಾಪಾರಸ್ಥರ ಸಂಘದ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ನೂತನ ಸಂಘದ ಅಧ್ಯಕ್ಷ ಮೆಹಬೂಬ ಸವಡಿ ಮಾತನಾಡಿ, ಸದರಿ ಸಂಘದ ಸ್ಥಾಪನೆಯ ಉದ್ದೇಶ ಎಳೆನೀರು ವ್ಯಾಪಾರಸ್ಥರನ್ನು ಸಂಘಟಿಸುವುದಾಗಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಹಾಗೂ ನಗರಸಭೆಯಿಂದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ಸಂಘಟನೆಯ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುವುದರ ಜೊತೆಗೆ ಪರಸ್ಪರ ಸಹಕಾರದಿಂದ ನಮ್ಮ ವ್ಯಾಪಾರ-ವಹಿವಾಟವನ್ನು ಸುಧಾರಿಸುವುದಲ್ಲದೆ, ಸಾಮಾಜಿಕ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿದರು.

ಸಂಘದ ಉಪಾಧ್ಯಕ್ಷರಾಗಿ ಮಹಾಲಿಂಗಪ್ಪ ಬಸಪ್ಪ ನವಲೂರ, ಕಾರ್ಯದರ್ಶಿಯಾಗಿ ಹೈದರಅಲಿ ಎಚ್. ಮಕಾನದಾರ, ಖಜಾಂಚಿಯಾಗಿ ಶ್ಯಾಮ ಎಮ್.ನೆಲದುರ್ಗ, ಸಂಘಟನಾ ಕಾರ್ಯದರ್ಶಿಯಾಗಿ ಮೆಹಬೂಬ ಬರದೂರ, ಸದಸ್ಯರುಗಳಾಗಿ ಶಿವನಗೌಡ, ಪ್ರಮೋದ, ಅಬ್ದುಲ್, ಗಂಗವ್ವ, ಅಬುಬಕರ, ಜಹಾಂಗೀರ, ಕಾನೂನು ಸಲಹೆಗಾರರಾಗಿ ಆಯ್ಕೆಯಾದ ಎಂ.ಎಂ. ಮೌಲ್ವಿ ವಕೀಲರು ಉಪಸ್ಥಿತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!