HomeIndia Newsಪಾಕಿಸ್ತಾನದ 100 ಕ್ಷಿಪಣಿಗಳ ಮೇಲೆ ಭಾರತ ದಾಳಿ: ಬದ್ದ ವೈರಿಗೆ ಶುರುವಾಯ್ತು ನಡುಕ!

ಪಾಕಿಸ್ತಾನದ 100 ಕ್ಷಿಪಣಿಗಳ ಮೇಲೆ ಭಾರತ ದಾಳಿ: ಬದ್ದ ವೈರಿಗೆ ಶುರುವಾಯ್ತು ನಡುಕ!

For Dai;y Updates Join Our whatsapp Group

Spread the love

ಇಸ್ಲಾಮಾಬಾದ್:- ಪಾಕಿಸ್ತಾನದ 100 ಕ್ಷಿಪಣಿಗಳ ಮೇಲೆ ಭಾರತ ಗುರುವಾರ ದಾಳಿ ನಡೆಸಿದ್ದು, ಈ ಮೂಲಕ ಬದ್ದ ವೈರಿಗೆ ನಡುಕ ಹುಟ್ಟಿಸಿದೆ.

ಪಹಲ್ಗಾಮ್​ನಲ್ಲಿ 26 ಜನರನ್ನು ಕೊಲ್ಲುವ ಮೂಲಕ ಶುರು ಮಾಡಿದ್ದ ಪಾಕಿಸ್ತಾನದ ದಾಳಿಯಿಂದ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಲೇ ಇದೆಯೇ ವಿನಃ ಕಡಿಮೆಯಾಗುತ್ತಿಲ್ಲ. ಜಮ್ಮುವನ್ನು ಗುರಿಯಾಗಿಸಿಕೊಂಡು ಮತ್ತೆ ಪಾಕಿಸ್ತಾನ ದಾಳಿ ನಡೆಸಿದ್ದು, ಕ್ಷಿಪಣಿಗಳನ್ನು ಬಳಸಿಕೊಂಡು ಹಮಾಸ್ ಸ್ಟೈಲ್‌ನಲ್ಲಿ ಪಾಕ್ ಆರ್ಮಿ ಆಟ್ಯಾಕ್ ಆರಂಭಿಸಿದೆ. ಆದರೆ ಭಾರತದ ಏರ್ ಡಿಫೆನ್ಸ್ ಯೂನಿಟ್‌ನಿಂದ ಪಾಕ್‌ನ ಎಲ್ಲ ಕ್ಷಿಪಣಿಗಳನ್ನು ಉಡೀಸ್ ಮಾಡಿದೆ. ಇಸ್ರೇಲ್ ಮೇಲೆ ಹಮಾಸ್ ದಾಳಿಯ ಮಾದರಿಯಲ್ಲಿ ಪಾಕ್ ಅರ್ಮಿ ದಾಳಿ ನಡೆಸಿದೆ. ಆದರೆ ಭಾರತದ ದಾಳಿಗೆ ಪಾಕ್ ಆರ್ಮಿ ಆಟ ನಡೆಯದಂತಾಗಿದೆ. ದಾಳಿ ಆರಂಭವಾಗುತ್ತಿದ್ದಂತೆ ಭಾರೀ ಶಬ್ದಕ್ಕೆ ಬೆಚ್ಚಿ ಬಿದ್ದು, ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಜಮ್ಮುವಿನ ಮೇಲೆ ಹಾಕಿಸಿದ್ದು, ನಗರದಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದಿವೆ. ದಾಳಿಗೆ ಭಾರತವು ತಕ್ಕ ಪ್ರತ್ಯುತ್ತರ ನೀಡಿದೆ. ಭಾರತದಲ್ಲಿ ಯಾವುದೇ ಹಾನಿಯಾಗಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!