HomePolitics Newsಭಾರತ ದೇಶ ಆಹಾರದಲ್ಲಿ ಸ್ವಾಲಂಭಿ ಆಗಿದೆ, ಅಂದ್ರೆ ಅದಕ್ಕೆ ಕಾಂಗ್ರೆಸ್ ಕಾರಣ: ಸಿಎಂ ಸಿದ್ದರಾಮಯ್ಯ

ಭಾರತ ದೇಶ ಆಹಾರದಲ್ಲಿ ಸ್ವಾಲಂಭಿ ಆಗಿದೆ, ಅಂದ್ರೆ ಅದಕ್ಕೆ ಕಾಂಗ್ರೆಸ್ ಕಾರಣ: ಸಿಎಂ ಸಿದ್ದರಾಮಯ್ಯ

For Dai;y Updates Join Our whatsapp Group

Spread the love

ಬಳ್ಳಾರಿ: ಭಾರತ ದೇಶ ಆಹಾರದಲ್ಲಿ ಸ್ವಾಲಂಭಿ ಆಗಿದೆ, ಅಂದ್ರೆ ಅದಕ್ಕೆ ಕಾಂಗ್ರೆಸ್ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಸಂಡೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರ ಕೋಟೆ. ಕಾಂಗ್ರೆಸ್ ಪಕ್ಷ ಯಾವತ್ತಿಗೂ ಕೂಡ ಬಡವರ ಪರ, ದೀನದಲಿತರ ಪರ, ಅಲ್ಪಸಂಖ್ಯಾತರು, ಮಹಿಳೆಯರ ಪರ ಇರುವ ಸರ್ಕಾರ. ನೆಹರು, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಮನಮೋಹನ್ ಸಿಂಗ್ ಕಾಲದಿಂದಲೂ ಬಡವರ ಪರ ಇರುವ ಸರ್ಕಾರ. ಭಾರತ ದೇಶ ಆಹಾರದಲ್ಲಿ ಸ್ವಾಲಂಭಿ ಆಗಿದೆ, ಅಂದ್ರೆ ಅದಕ್ಕೆ ಕಾಂಗ್ರೆಸ್ ಕಾರಣ ಎಂದು ಬೀಗಿದರು.

ಲಾಲ್‌ಬಹದ್ದೂರ್‌ ಶಾಸ್ತ್ರಿ ಅವರ ಕಾಲದಲ್ಲಿ ಹಸಿರು ಕ್ರಾಂತಿ ಮಾಡಿದ್ರು. ಆಗ ಭಾರತ ದೇಶವನ್ನ ಆಹಾರದಲ್ಲಿ ಸ್ವಾಲಂಬಿಯನ್ನಾಗಿ ಮಾಡಿದ್ರು. ಬಿಜೆಪಿ ಅಂದ್ರೆ ಕೇವಲ ಮೇಲ್ವರ್ಗದ ಪಕ್ಷ. ಬಡವರ ಪರ, ರೈತರ ಪರವಾದ ಸರ್ಕಾರ ಬಿಜೆಪಿ ಅಲ್ಲಾ. ಬಿಜೆಪಿಯವರು ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದರೂ ಬಡವರಿಗೋಸ್ಕರ ಏನೂ ಕೆಲಸ ಮಾಡಿಲ್ಲ. ಅಧಿಕಾರ ಕೊಟ್ರು ಏನು ಕೆಲಸ ಮಾಡಿಲ್ಲ.

ಆದ್ರೆ ಕಾಂಗ್ರೆಸ್‌ ಅನ್ನಭಾಗ್ಯ, ಕೃಷಿ ಭಾಗ್ಯ, ಮೈತ್ರಿ, ಮನಸ್ವಿನಿ, ಮಾತೃಪೂರ್ಣ, ರೈತರ ಸಾಲ ಮನ್ನಾ ಹತ್ತು ಹಲವು ಕಾರ್ಯಕ್ರಮಗಳನ್ನ ಮಾಡಿದೆ. ಯಡಿಯೂರಪ್ಪ ಕೇವಲ ಸೈಕಲ್ ಕೊಟ್ಟೆ, ಸೀರೆ ಕೊಟ್ಟೆ ಅಂತಾ ಹೇಳ್ತಾರೆ. ಇವೆರಡನ್ನ ಬಿಟ್ಟು ಉಳಿದಿದ್ದೆಲ್ಲವನ್ನ ಲೂಟಿ ಮಾಡಿದ್ದಾರೆ ಎಂದು ಕುಟುಕಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!