ಬೆಂಗಳೂರು: ಏಷ್ಯಾಕಪ್ನಲ್ಲಿ ಇಂದು ಭಾರತ- ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯವು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೀತಿದೆ. ಆದ್ರೆ ಭಾರತ-ಪಾಕ್ ಕ್ರಿಕೆಟ್ ಮ್ಯಾಚ್ಗೆ ಶಾಸಕ ಪ್ರದೀಪ್ ಈಶ್ವರ್ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
ಭಾರತ ಪಾಕಿಸ್ತಾನ ಮ್ಯಾಚ್ ರದ್ದು ಮಾಡಬೇಕು. ಯಾವ ಮುಖ ಇಟ್ಟುಕೊಂಡು ಮ್ಯಾಚ್ ನಡೆಸುತ್ತಿದ್ದಾರೆ? ಪಹಲ್ಗಾಮ್ ಘಟನೆಯ ನೋವು ನಮಗೆ ಇನ್ನೂ ಇದೆ. ಕೇಂದ್ರದ ಬಿಜೆಪಿ ಈ ಮ್ಯಾಚ್ ನಿಲ್ಲಿಸಬಹುದಿತ್ತು, ಆದ್ರೆ ನಿಲ್ಲಿಸಿಲ್ಲ ಎಂದು ಕಿಡಿಕಾರಿದರು.
ಅಮಿತಾ ಶಾ ಮಗ ಜೈ ಶಾ ಇದ್ದಾರೆ, ಅವರಿಗೆ ಬ್ಯುಸಿನೆಸ್ ಮುಖ್ಯ. ಇಲ್ಲಿ ಅಶೋಕ, ವಿಜಯೇಂದ್ರ, ಯತ್ನಾಳ್ ಹೇಳಿದ್ರು ಪಾಕಿಸ್ತಾನ ಅಂತ ಬೊಬ್ಬೆ ಹಾಕಿದ್ರು. ನಿಮಗೆ ಧಮ್ಮು, ತಾಕತ್ ಇದ್ರೆ ಕೇಂದ್ರ ಸರ್ಕಾರಕ್ಕೆ ಹೇಳಿ ಮ್ಯಾಚ್ ನಿಲ್ಲಿಸಿ. ನಾವಿನ್ನೂ ಪಹಲ್ಗಾಮ್ ಘಟನೆ ಮರೆತಿಲ್ಲ. ನಮಗೆ ನೋವಿದೆ, ಅದಕ್ಕೆ ನಾನು ಇವತ್ತಿನ ಮ್ಯಾಚ್ ನೋಡಲ್ಲ ಎಂದು ವಾಗ್ದಾಳಿ ನಡೆಸಿದರು.



