ನವದೆಹಲಿ: ನಾಳೆ ನಡೆಯಲಿರುವ ಟಿ20 ವಿಶ್ವಕಪ್ ಫೈನಲ್ ಪಂದ್ಯ ಹಿನ್ನೆಲೆಯಲ್ಲಿ ನವದೆಹಲಿಯಿಂದ ಅಹಮದಾಬಾದ್‌ಗೆ ವಿಶೇಷ ರೈಲು ಸಂಚರಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.
ಪ್ರಯಾಣಿಕರಿಗೆ ರೈಲುಗಳ ಲಭ್ಯತೆ ಕಡಿಮೆ ಇರುವುದಲ್ಲದೆ ವಿಮಾನಗಳ ಟಿಕೆಟ್ ದರ ಹೆಚ್ಚಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ವಿಭಾಗದ ಮಾಹಿತಿ ಪ್ರಕಾರ, ಈ ವಿಶೇಷ ರೈಲು ಇಂದು ರಾತ್ರಿ 11:45ಕ್ಕೆ ನವದೆಹಲಿಯಿಂದ ಹೊರಟು ನಾಳೆ (ಮಾರ್ಚ್ 8) ಮಧ್ಯಾಹ್ನ 2:30ರ ಸುಮಾರಿಗೆ ಸಬರಮತಿ ರೈಲು ನಿಲ್ದಾಣ ತಲುಪಲಿದೆ. ಈ ರೈಲು ದೆಹಲಿ ಕಂಟೋನ್ಮೆಂಟ್, ಗುರುಗ್ರಾಮ್ ಮತ್ತು ಜೈಪುರ ಮೂಲಕ ಸಂಚರಿಸಲಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ರೈಲಿನಲ್ಲಿ 2ನೇ ಎಸಿ, 3ನೇ ಎಸಿ ಸೇರಿದಂತೆ ಒಟ್ಟು 19 ಕೋಚ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.
ನಾಳೆ ಸಂಜೆ 7 ಗಂಟೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದ್ದು, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.



