HomeSports NewsIPL 2025: ತವರಲ್ಲಿ ಹ್ಯಾಟ್ರಿಕ್ ಸೋಲು: ಇಂದು ಚಿನ್ನಸ್ವಾಮಿಯಲ್ಲಿ ರಾಜಸ್ಥಾನ್ ಮಣಿಸುತ್ತಾ ಆರ್ ಸಿಬಿ!?

IPL 2025: ತವರಲ್ಲಿ ಹ್ಯಾಟ್ರಿಕ್ ಸೋಲು: ಇಂದು ಚಿನ್ನಸ್ವಾಮಿಯಲ್ಲಿ ರಾಜಸ್ಥಾನ್ ಮಣಿಸುತ್ತಾ ಆರ್ ಸಿಬಿ!?

For Dai;y Updates Join Our whatsapp Group

Spread the love

2025ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಆದರೆ ಆರ್ ಸಿಬಿಗೆ ತವರು ಮೈದಾನ ಅಂದ್ರೆ ಚಿನ್ನಸ್ವಾಮಿ ಕ್ರೀಡಾಂಗಣ ಯಾಕೋ ಸವಾಲಾಗಿ ಪರಿಣಮಿಸಿದಂತೆ ಕಾಣುತ್ತಿದೆ. ಬೇರೆ ರಾಜ್ಯಕ್ಕೆ ಹೋಗಿ ಅಲ್ಲಿ ಗೆದ್ದು ಬರುವ ಆರ್ ಸಿಬಿಗೆ ಚಿನ್ನಸ್ವಾಮಿ ಸ್ಟೇಡಿಯಂ ಮಾತ್ರ ಕಬ್ಬಿಣದ ಕಡಲೆಯಾಗಿದೆ.

ಎಸ್, ಇದುವರೆಗೂ 8 ಪಂದ್ಯಗಳನ್ನು ಆಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, 5 ರಲ್ಲಿ ಗೆಲುವು ದಾಖಲಿಸಿ ಮೂರರಲ್ಲಿ ಸೋಲು ಕಂಡಿದೆ. ಸೋತಿರುವ ಪಂದ್ಯಗಳೆಲ್ಲವೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಂಬುವುದು ಗಮನಾರ್ಹ. ಹೀಗಾಗಿ ಇದುವರೆಗೂ ಚಿನ್ನಸ್ವಾಮಿಯಲ್ಲಿ ಗೆಲುವನ್ನೇ ಕಾಣದ ಆರ್​ಸಿಬಿಗೆ ಇಂದು ಆರ್​ಆರ್ ವಿರುದ್ಧ ಗೆಲ್ಲೋದು ಕೂಡ ಟಫ್ ಚಾಲೆಂಜ್ ಆಗಿದೆ.

ಎಸ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಸಂಜೆ 7.30ಕ್ಕೆ ಬೆಂಗಳೂರು ಮತ್ತು ರಾಜಸ್ಥಾನ್ ತಂಡಗಳು ಸೆಣಸಾಟ ನಡೆಸಲಿವೆ. ಎರಡೂ ತಂಡಗಳು ಪ್ಲೇ-ಆಫ್ ಕನಸು ಕಾಣುತ್ತಿದ್ದು, ಗೆಲುವು ಯಾರಿಗೆ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಪ್ಲೇ-ಆಫ್​ಗೆ ಹೋಗಬೇಕು ಅಂದ್ರೆ ಆರ್​ಸಿಬಿ ಇವತ್ತಿನ ಪಂದ್ಯ ಗೆಲ್ಲಲೇಬೇಕಿದೆ. ಈಗಾಗಲೇ 8 ಪಂದ್ಯಗಳಲ್ಲಿ ಐದು ಗೆದ್ದಿರುವ ಆರ್​ಸಿಬಿ, ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಚಿನ್ನಸ್ವಾಮಿಯಲ್ಲಿ ಮೂರು ಪಂದ್ಯಗಳಲ್ಲಿ ಸೋತಿರುವ ಆರ್​ಸಿಬಿ ಮೇಲೆ ಫ್ಯಾನ್ಸ್​ ಕೊಂಚ ಬೇಸರಗೊಂಡಿದ್ದಾರೆ. ತವರು ಮೈದಾನದಲ್ಲಿ ಸಂಪೂರ್ಣ ಬೆಂಬಲ ಸಿಕ್ಕರೂ, ಹೋಂ ಅಡ್ವಾಂಟೇಜ್ ಪಡೆದುಕೊಳ್ಳುವಲ್ಲಿ ಆಟಗಾರರು ಫೇಲ್ ಆಗ್ತಿದ್ದಾರೆ. ಕಠಿಣ ಪರಿಸ್ಥಿಯಲ್ಲೂ ಹೋರಾಡುವ ವಿರಾಟ್ ಕೊಹ್ಲಿ ಮೇಲೆ ಅಭಿಮಾನಿಗಳು ಭರವಸೆ ಇಟ್ಟಿದ್ದು, ಇಂದಾದರೂ ಗೆಲುವು ತಂದುಕೊಡ್ತಾರಾ ಕಾದು ನೋಡಬೇಕಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!