HomeSports NewsIPL 2025: ಐಪಿಎಲ್ ಮೆಗಾ ಹರಾಜು: ಸಮಯ, ಸ್ಥಳ ಕುರಿತಾದ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ!

IPL 2025: ಐಪಿಎಲ್ ಮೆಗಾ ಹರಾಜು: ಸಮಯ, ಸ್ಥಳ ಕುರಿತಾದ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ!

For Dai;y Updates Join Our whatsapp Group

Spread the love

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಮೆಗಾ ಹರಾಜಿಗೆ ವೇದಿಕೆ ಸಿದ್ಧವಾಗಿದೆ. ಸೌದಿ ಅರೇಬಿಯಾದ ಜಿದ್ಧಾದಲ್ಲಿ ಇಂದು ಮತ್ತು ನಾಳೆ ನಡೆಯಲಿರುವ ಮೆಗಾ ಹರಾಜಿನಲ್ಲಿ ಒಟ್ಟು 577 ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ.

2025ರ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಇದು ವಿದೇಶದಲ್ಲಿ ನಡೆಯುತ್ತಿರುವ ಎರಡನೇ ಹರಾಜು. ಹರಾಜಿನಲ್ಲಿ ಒಟ್ಟು 1,574 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಆದರೆ ಫ್ರಾಂಚೈಸಿಗಳ ಸೂಚನೆಯ ಮೇರೆಗೆ ಬಿಸಿಸಿಐ 577 ಆಟಗಾರರನ್ನು ಶಾರ್ಟ್​ಲಿಸ್ಟ್​ ಮಾಡಿದೆ. ಈ ಪೈಕಿ 204 ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ಸಿದ್ಧವಾಗಿವೆ.

ಇದರಲ್ಲಿ 70 ವಿದೇಶಿ ಆಟಗಾರರು ಇರಲಿದ್ದಾರೆ.ಈ ಮೆಗಾ ಈವೆಂಟ್ ಬಗ್ಗೆ ಪ್ರಮುಖ ವಿವರಗಳನ್ನ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.ಇಂದು ಮಧ್ಯಾಹ್ನ 3:30 ಕ್ಕೆ ಹರಾಜು ಪ್ರಾರಂಭವಾಗಲಿದೆ. ಒಂದೂವರೆ ಗಂಟೆಗಳ ಸುದೀರ್ಘ ಹರಾಜಿನ ನಂತರ 45 ನಿಮಿಷಗಳ ಊಟದ ವಿರಾಮ ಇರುತ್ತದೆ. ಭಾರತೀಯ ಕಾಲಮಾನ ರಾತ್ರಿ 10:30 ರವರೆಗೆ ಹರಾಜು ನಡೆಯಲಿದೆ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?
ಈ ಬಾರಿಯ ಮೆಗಾ ಹರಾಜನ್ನು ಸ್ಟಾರ್ ಸ್ಪೋರ್ಟ್ಸ್​ ನೆಟ್​ವರ್ಕ್​ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಸಿನಿಮಾ ಆ್ಯಪ್​ನಲ್ಲೂ ಉಚಿತ ಲೈವ್ ಸ್ಟ್ರೀಮಿಂಗ್ ಇರಲಿದೆ.

ಹರಾಜು ಪಟ್ಟಿಯಲ್ಲಿರುವ ಆಟಗಾರರೆಷ್ಟು?
ಈ ಬಾರಿಯ ಮೆಗಾ ಹರಾಜಿಗೆ 1574 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರು. ಈ ಆಟಗಾರರನ್ನು ಶಾರ್ಟ್ ಲಿಸ್ಟ್ ಮಾಡಲಾಗಿದ್ದು, ಅದರಂತೆ ಫೈನಲ್ ಲಿಸ್ಟ್​ನಲ್ಲಿ 577 ಆಟಗಾರರು ಸ್ಥಾನ ಪಡೆದಿದ್ದಾರೆ.

ವಿದೇಶಿ ಆಟಗಾರರ ಸಂಖ್ಯೆ ಎಷ್ಟು?
577 ಆಟಗಾರರಲ್ಲಿ 367 ಭಾರತೀಯರು ಮತ್ತು 210 ವಿದೇಶಿ ಆಟಗಾರರಿದ್ದಾರೆ.

ಒಟ್ಟು ಹರಾಜು ಮೊತ್ತವೆಷ್ಟು?
ಈ ಬಾರಿಯ ಮೆಗಾ ಹರಾಜಿಗಾಗಿ ಒಟ್ಟು 120 ಕೋಟಿ ರೂ. ಅನ್ನು ನಿಗದಿಪಡಿಸಲಾಗಿದೆ. ಇದೀಗ 10 ಫ್ರಾಂಚೈಸಿಗಳು ರಿಟೈನ್ ಮಾಡಿಕೊಂಡಿರುವ ಆಟಗಾರರ ಮೊತ್ತವನ್ನು ಒಟ್ಟು ಹರಾಜು ಮೊತ್ತದಿಂದ ಕಡಿತಗೊಳಿಸಲಾಗುತ್ತದೆ. ಇನ್ನುಳಿದ ಮೊತ್ತದಲ್ಲಿ ಪ್ರತಿ ಫ್ರಾಂಚೈಸಿಗಳು ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!