HomeIndia Newsಇಂದಿನಿಂದ ವೈಭವದ ಪುರಿ ಜಗನ್ನಾಥ ರಥಯಾತ್ರೆ: ದೇಶದ ಜನತೆಗೆ ಪ್ರಧಾನಿ ಮೋದಿ ಶುಭಾಶಯ!

ಇಂದಿನಿಂದ ವೈಭವದ ಪುರಿ ಜಗನ್ನಾಥ ರಥಯಾತ್ರೆ: ದೇಶದ ಜನತೆಗೆ ಪ್ರಧಾನಿ ಮೋದಿ ಶುಭಾಶಯ!

For Dai;y Updates Join Our whatsapp Group

Spread the love

ನವದೆಹಲಿ: ಇಂದಿನಿಂದ ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆ ಪ್ರಾರಂಭವಾಗಲಿದೆ. ಈ ರಥಯಾತ್ರೆಯಲ್ಲಿ ಜಗನ್ನಾಥ, ಬಲಭದ್ರ ಹಾಗೂ ಸುಭದ್ರೆಯರ ವಿಗ್ರಹಗಳನ್ನು ಜಗನ್ನಾಥ ದೇಗುಲದಿಂದ ಗುಂಡಿಚಾ ದೇಗುಲದವರೆಗೆ ರಥದಲ್ಲಿ ಕರೆದೊಯ್ಯಲಾಗುತ್ತದೆ. ಗಂಟೆ, ಶಂಖಗಳು ಮತ್ತು ‘ಜೈ ಜಗನ್ನಾಥ’ ಮಂತ್ರಗಳ ನಡುವೆ ರಥಗಳು ಚಲಿಸುಲಿದ್ದು,

ಪುರಿಯ ವಾತಾವರಣವು ಅದ್ಭುತ ಮತ್ತು ದೈವಿಕ ಶಕ್ತಿಯಿಂದ ತುಂಬಿರಲಿದೆ. ಇನ್ನೂ ಪುರಿ ಜಗನ್ನಾಥ ಯಾತ್ರೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಶುಭಾಶಯ ಕೋರಿದ್ದಾರೆ. ದೇವರು ಪ್ರತಿಯೊಬ್ಬರಿಗೂ ಖುಷಿ, ಸಮೃದ್ಧಿ, ಅದೃಷ್ಟ ಹಾಗೂ ಅದ್ಬುತ ಆರೋಗ್ಯ ನೀಡುವಂತೆ ಕೋರಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಮೋದಿ, ”ಜಗನ್ನಾಥ ರಥಯಾತ್ರೆಯ ಪವಿತ್ರ ಸಂದರ್ಭದಲ್ಲಿ, ದೇಶದ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ.

ನಂಬಿಕೆ ಮತ್ತು ಭಕ್ತಿಯ ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನದಲ್ಲೂ ಸಂತೋಷ, ಸಮೃದ್ಧಿ, ಅದೃಷ್ಟ ಮತ್ತು ಅತ್ಯುತ್ತಮ ಆರೋಗ್ಯವನ್ನು ತರಲಿ” ಎಂದಿದ್ದಾರೆ. ಜಗನ್ನಾಥ ರಥಯಾತ್ರೆಯ ಜೊತೆಗೆ, ಹಿಂದೂ ಕ್ಯಾಲೆಂಡರ್‌ ಪ್ರಕಾರ ಆಷಾಢ ಮಾಸದ ಎರಡನೇ ದಿನದಿಂದ ಪ್ರಾರಂಭವಾಗುವ ಕಚ್ ಹೊಸ ವರ್ಷಕ್ಕೂ ಪ್ರಧಾನಿ ಶುಭ ಕೋರಿದ್ದಾರೆ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!