ಟೀಂ ಇಂಡಿಯಾದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಮತ್ತೊಂದು ದಾಖಲೆ ಬರೆಯುವ ಸನಿಹದಲ್ಲಿದ್ದಾರೆ.
ʻಮಿಸ್ಟರ್ 360ʼ ಖ್ಯಾತಿಯ ಸೂರ್ಯಕುಮಾರ್ ಯಾದವ್ ಈವರೆಗೆ ಆಡಿರುವ 72 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 2,461 ರನ್ ಸಿಡಿಸಿದ್ದಾರೆ. ಅ.9ರಂದು ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿರುದ್ಧ ನಡೆಯಲಿರುವ 2ನೇ ಟಿ20ಪ ಪಂದ್ಯದಲ್ಲಿ 39 ರನ್ ಸಿಡಿಸಿದ್ರೆ, 2,500 ಪೂರೈಸಲಿದ್ದಾರೆ.
ಇದರೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 2,500 ರನ್ ಪೂರೈಸಿದ ವಿಶ್ವದ 2ನೇ ಆಟಗಾರ ಎಂಬ ವಿಶೇಷ ಸಾಧನೆಗೆ ಪಾತ್ರರಾಗಲಿದ್ದಾರೆ.
67 ಪಂದ್ಯಗಳಲ್ಲಿ ಈ ಸಾಧನೆ ಮಾಡಿರುವ ಪಾಕ್ ತಂಡದ ನಾಯಕ ಬಾಬರ್ ಆಜಂ ಅಗ್ರಸ್ಥಾನದಲ್ಲಿದ್ದಾರೆ. ಅಲ್ಲದೇ ವಿರಾಟ್ ಕೊಹ್ಲಿ , ಮೊಹಮ್ಮದ್ ರಿಜ್ವಾನ್, ಆರನ್ ಫಿಂಚ್, ಮಾರ್ಟಿನ್ ಗಪ್ಟಿಲ್ ಈ ಸಾಧಕರ ಪಟ್ಟಿಯಲ್ಲಿದ್ದಾರೆ



