HomeKarnataka Newsಕಲಬುರ್ಗಿ: ಕಲುಷಿತ ನೀರು ಕುಡಿದು 80 ಜನ ಅಸ್ವಸ್ಥ – PDO ಸಸ್ಪೆಂಡ್‌!

ಕಲಬುರ್ಗಿ: ಕಲುಷಿತ ನೀರು ಕುಡಿದು 80 ಜನ ಅಸ್ವಸ್ಥ – PDO ಸಸ್ಪೆಂಡ್‌!

For Dai;y Updates Join Our whatsapp Group

Spread the love

ಕಲಬುರ್ಗಿ:- ಓವರ್ ಹೆಡ್ ಟ್ಯಾಂಕ್ ಕಲುಷಿತ ನೀರು ಸೇವಿಸಿ 80ಕ್ಕೂ ಅಧಿಕ ಜನ ಅಸ್ವಸ್ಥಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಿಂಬರ್ಗಾ ಪಿಡಿಒ ಸುಕನ್ಯಾ ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ.

ಗ್ರಾಮದ ಭೋವಿ ಸಮಾಜ ಬಡಾವಣೆಯಲ್ಲಿ 3-4 ತಿಂಗಳಿನಿಂದ ಸ್ವಚ್ಛ ಮಾಡದ ಓವರ್ ಹೆಡ್ ಟ್ಯಾಂಕ್ ದಿಂದ ಸರಬರಾಜಾದ ನೀರನ್ನು ಕುಡಿದು ಸೋಮವಾರ 80ಕ್ಕೂ ಅಧಿಕ ಜನರು ವಾಂತಿ ಭೇದಿಯಿಂದ ಬಳಲಿ ಅಸ್ವಸ್ಥಗೊಂಡಿದ್ದರು. ತಕ್ಷಣ ನಿಂಬರ್ಗಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಅವರಿಗೆ ಚಿಕಿತ್ಸೆ ಕೊಡಲಾಗಿದ್ದು, ಕ್ರಮೇನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

ಗ್ರಾಮದಲ್ಲಿ ಇಂತಹ ಅವಘಡ ಸಂಭವಿಸಲು ಗ್ರಾಪಂ ಪಂಚಾಯತಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಟ್ಯಾಂಕ್ ಸ್ವಚ್ಛಗೊಳಿಸುವಂತೆ ಅನೇಕ ಬಾರಿ ಹೇಳಿದ್ದರೂ ಗಮನ ಹರಿಸದಿದ್ದಕ್ಕೆ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಬೆನ್ನಲ್ಲೇ ಎಚ್ಚೆತ್ತುಕೊಂಡ ತಾಲೂಕು ಆಡಳಿತ ಪಿಡಿಒ ಸುಕನ್ಯಾ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಿದೆ. ಪಕ್ಕದ ಸುಂಟನೂರ ಗ್ರಾಪಂ‌ ಪಿಡಿಒ ಅವರಿಗೆ ಪ್ರಭಾರ ವಹಿಸಲಾಗಿದೆ ಎಂದು ಆಳಂದ ಇಓ ಮಾನಪ್ಪ ಕಟ್ಟಿಮನಿ ತಿಳಿಸಿದರು.

ಗ್ರಾಮಸ್ಥರು ಅಸ್ವಸ್ಥರಾಗಿರುವ ಸುದ್ದಿ ತಿಳಿದು ಮಂಗಳವಾರ ನಿಂಬರ್ಗಾ ಗ್ರಾಮಕ್ಕೆ ದೌಡಾಯಿಸಿದ ಶಾಸಕ ಬಿ.ಆರ್ ಪಾಟೀಲ್ ಅವರು ನೇರವಾಗಿ ಆಸ್ಪತ್ರೆಗೆ ತೆರಳಿ ಜನರ ಆರೋಗ್ಯ ವಿಚಾರಿಸಿ ಹಣ್ಣು ಹಂಪಲು ನೀಡಿ ಧೈರ್ಯ ತುಂಬಿದ್ರು. ಸಮುದಾಯ ಆರೋಗ್ಯ ಕೇಂದ್ರದ ಮೆಡಿಕಲ್ ಆಫೀಸರ್ ಡಾ. ಇರ್ಫಾನ್ ಅಲಿ ಅವರೊಂದಿಗೆ ಸಮಾಲೋಚನೆ ನಡೆಸಿ ಜನರ ಆರೋಗ್ಯದ ಸ್ಥೀತಿಗತಿಯ ಬಗ್ಗೆ ಮಾಹಿತಿ‌ ಕಲೆಹಾಕಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!